ಬೆಂಗಳೂರು: ಚಂದನವನದಲ್ಲಿ ಲಾಂಗ್ ಎಂದರೆ ನಮಗೆ ತಕ್ಷಣ ನೆನೆಪಿಗೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್. ಈಗ ಅವರು ಯುವನಟ ಶ್ರೇಯಸ್ ಖುಷ್‍ಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಡುತ್ತಿದ್ದಾರೆ.
ಚಂದನವನಕ್ಕೆ ಸ್ಟೈಲಿಶ್ ಆಗಿ ಲಾಂಗ್ ಹೇಗೆ ಹಿಡಿಯಬೇಕು ಎಂದು ತೋರಿಸಿದವರು ಶಿವಣ್ಣ. ಅವರು ಲಾಂಗ್ ಹಿಡಿಯುವ ಸ್ಟೈಲ್‍ನ ಇಷ್ಟಪಡದ ಜನರಿಲ್ಲ. ಈಗ ಯುವನಟ ಶ್ರೇಯಸ್ ಖುಷ್‍ಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಇದನ್ನೂ ಓದಿ:ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ
Advertisement
Advertisement
ಯಾರಿದು ನಟ?
‘ರಾಣ’ ಚಿತ್ರದ ಮೂಲಕ ಹೊಸದಾಗಿ ಕನ್ನಡಿಗರಿಗೆ ಶ್ರೇಯಸ್ ಖುಷ್ ಪರಿಚಯವಾಗುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸೆಟ್‍ಗೆ ಶಿವಣ್ಣ ಹೋಗಿದ್ದಾರೆ. ಆ ಸಮಯದಲ್ಲಿ ಖುಷ್ ಅವರ ಆಸೆಯಂತೆ ಶಿವಣ್ಣ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ಇದಕ್ಕೆ ಖುಷ್ ಫುಲ್ ಖುಷ್ ಆಗಿದ್ದಾರೆ.ಇದನ್ನೂ ಓದಿ:ಚಂದನವನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಎಂಟ್ರಿ
Advertisement
Advertisement
ಸದ್ಯಕ್ಕೆ ಶಿವಣ್ಣ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಂಗ್ ಹಿಡಿಯುವ ಸಿನಿಮಾಗಳನ್ನು ಸ್ವಲ್ಪ ದೂರವಿಟ್ಟಿದ್ದಾರೆ. ಅವರ 125ನೇ ಸಿನಿಮಾ ಗೀತಾ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿದೆ. ಈಗ ಆ ಸಿನಿಮಾದ ಪ್ರಿ ಪ್ರೊಡಕ್ಷನ್ ನಡೆಯುತ್ತಿದ್ದು, ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ನಡೆಯುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ:ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ