ಪುನೀತ್ ರಾಜ್ ಕುಮಾರ್ ಕನಸಿನ ಮೈಸೂರಿನ ಶಕ್ತಿಧಾಮದಲ್ಲಿ ಇಂದು ಶಕ್ತಿಧಾಮ ವಿದ್ಯಾ ಶಾಲೆಗೆ ಶಂಕುಸ್ಥಾಪನೆ ಸಮಾರಂಭ ನಡೆಯಿತು. ಸಮಾರಂಭಕ್ಕೆ ಪತ್ನಿ, ಮಗಳ ಜೊತೆ ನಟ ಡಾ. ಶಿವರಾಜ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿರುವ ಭೋಜನಾ ಶಾಲೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ನಿರ್ಮಿಸಿರುವ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಇದಾಗಿತ್ತು. ಸುತ್ತೂರು ಶ್ರೀಗಳು, ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ನಿವೃತ್ತಿ ಐಪಿಎಸ್ ಅಧಿಕಾರಿ ಕೆಂಪಯ್ಯ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ
Advertisement
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ಶಕ್ತಿ ಧಾಮಕ್ಕೆ ಒಂದು ಕಟ್ಟಡ ಕಟ್ಟಿಕೊಟ್ಟಿದ್ದಕ್ಕೆ ಇನ್ಫೋಸಿಸ್ ಗೆ ಕೃತಜ್ಞತೆ ಸಲ್ಲಿಸಿದರು. ಮೊದಲು ನಾನು ಶಕ್ತಿಧಾಮಕ್ಕೆ ಅಷ್ಟಾಗಿ ಬರುತ್ತಿರಲಿಲ್ಲ. ಅಮ್ಮ ಎಷ್ಟೋ ಬಾರಿ ಹೇಳಿದರೂ ನಾನು ಇಲ್ಲಿಗೆ ಬರುತ್ತಿದದ್ದು ಕಡಮೆ. ಅವತ್ತು ಮ್ಯೂಸಿಕ್ ಲ್ ನೈಟ್ ಮಾಡಿ ಅಪ್ಪಾಜಿ ದೊಡ್ಡ ಮಟ್ಟದ ಹಣ ಸಂಗ್ರಹಿಸಿ ಶಕ್ತಿ ಧಾಮದ ಅಭಿವೃದ್ಧಿಗೆ ನೀಡಿದರು. ಆದರೆ, ಈಗ ಗೀತಾ ಇದರ ಉಸ್ತುವಾರಿ ಹೊತ್ತುಕೊಂಡ ಮೇಲೆ ಇಲ್ಲಿಗೆ ಹೆಚ್ಚಾಗಿ ಬರುವುದಕ್ಕೆ ಶುರು ಮಾಡಿದೆ. ಅಪ್ಪು ನಿಧನ ನಂತರ ದುಃಖ ಮರೆಯಲು ಇಲ್ಲಿಗೆ ಹೆಚ್ಚಾಗಿ ಬರುವುದಕ್ಕೆ ಆರಂಭಿಸಿದೆ. ಅಪ್ಪು ನನ್ನು ಶಕ್ತಿ ಧಾಮದ ಮಕ್ಕಳಲ್ಲಿ ಕಾಣುತ್ತೇನೆ. ನನ್ನ ಜೀವ ಇರುವವರೆಗೂ ಶಕ್ತಿ ಧಾಮದ ಜೊತೆ ನಾನು ಇರುತ್ತೇನೆ’ ಎಂದರು. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?
Advertisement
Advertisement
‘ಅಮ್ಮ (ಪಾರ್ವತಮ್ಮ ರಾಜ್ ಕುಮಾರ್) ನಂತರ ನಾನು ಇಲ್ಲಿನ ಉಸ್ತುವಾರಿ ಹೊತ್ತೆ. ಶಕ್ತಿಧಾಮದ ಅಧ್ಯಕ್ಷೆ ಆಗಲು ನಾನು ಎಷ್ಟು ಅರ್ಹಳು ಗೊತ್ತಿಲ್ಲ. ಕೆಂಪಯ್ಯ ಅವರು ಅಧ್ಯಕ್ಷ ಸ್ಥಾನದಲ್ಲಿ ಇರಬೇಕಿತ್ತು. ನಾನು ಇವರ ಮಾರ್ಗದರ್ಶನ ದಲ್ಲಿ ಶಕ್ತಿಧಾಮದ ಮುನ್ನಡೆಸುತ್ತಿದ್ದೇನೆ. ಹೊಸ ಕಟ್ಟಡ ಕಟ್ಟುವವರೆಗೂ ಶಕ್ತಿಧಾಮದದ ಒಳಗಿನ ಕೌಶಲ್ಯ ಭವನದಲ್ಲಿ ಜೂನ್ ನಲ್ಲಿ ಶಾಲೆ ಆರಂಭಿಸುತ್ತೇವೆ. ಬಹಳಷ್ಟು ನಿರ್ಮಾಪಕರು ಶಕ್ತಿಧಾಮದ ಬೆನ್ನಿಗೆ ನಿಂತಿದ್ದಾರೆ’ ಎಂದು ಶಕ್ತಿಧಾಮದ ಅಧ್ಯಕ್ಷೆ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್.
Advertisement
ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ‘ಸ್ತ್ರೀ ಅಂದರೇನೆ ಶಕ್ತಿ. ಭಗವಂತ ಸೃಷ್ಟಿ ಮಾಡುವಾಗ ಒಂದು ಹಿಡಿ ಶಕ್ತಿ ಜಾಸ್ತಿ ಕೊಟ್ಟಿರೋದು ತಾಯಿಗೆ. ಪುರುಷ ಪ್ರಧಾನ ಸಮಾಜವಾದರೂ 9 ತಿಂಗಳು ಮಗುವನ್ನು ಹೇರುವ ಶಕ್ತಿ ಪುರುಷನಿಗೆ ಇಲ್ಲ. ಭೂಮಿಗೆ ಬಂದ ಮೇಲೆ ಬಹಳ ಸಂಬಂಧ ಸೃಷ್ಟಿಯಾಗುತ್ತವೆ. ಆದರೆ, ಜನ್ಮ ಪೂರ್ವ ಸಂಬಂಧ ಅದು ತಾಯಿ ಜೊತೆಗೆ ಮಾತ್ರ. ದುರ್ದೈವದ ಸಂಗತಿ ಎಂದರೆ ಸ್ತ್ರಿ ಶೋಷಣೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಪೊಲೀಸ್ ಅಧಿಕಾರಿಯಾಗಿ ಕೆಂಪಯ್ಯ ಇಂತಹ ಶೋಷಿತ ಮಹಿಳೆಯರ ರಕ್ಷಣೆಗೆ ಶಕ್ತಿಧಾಮ ಕಟ್ಟಲು ಪ್ರೇರಣೆ ಆಗಿದ್ದಾರೆ. ಡಾ. ರಾಜ್ ಕುಮಾರ್ – ಕೆಂಪಯ್ಯ ನಡುವೆ ಅನ್ಯೋನ್ಯ ಸಂಬಂಧ ಇತ್ತು. ಇವರು ಸೇರಿ ಇಂತಹ ಶಕ್ತಿಧಾಮ ಸ್ಥಾಪಿಸಿದ್ದಾರೆ.
ಸರಕಾರ ಮಾಡುವ ಕೆಲಸವನ್ನು ಈ ಶಕ್ತಿಧಾಮ ಮಾಡುತ್ತಿದೆ. ಅಪ್ಪುಗೆ ತಾಯಿ ಕರುಳು ಇತ್ತು. ಅಪ್ಪು ಎಲ್ಲೇ ಇದ್ದರೂ ಈ ಶಕ್ತಿಧಾಮ ಬೆಳೆಯಲು ಶಕ್ತಿ ತುಂಬುತ್ತಾರೆ. ಬರೀ ಮಾತಿಗೆ ಸಾಮಾಜಿಕ ನ್ಯಾಯ ಎಂದು ಹೇಳಿದರೆ ಪ್ರಯೋಜನವಿಲ್ಲ. ಅವಕಾಶ ಸಿಕ್ಕಾಗ ಶೋಷಿತರ ಪರವಾಗಿ ಕೆಲಸ ಮಾಡಬೇಕು. ಶಕ್ತಿಧಾಮದ ಮಕ್ಕಳನ್ನು ಅನಾಥ ಮಕ್ಕಳು ಎನ್ನಬೇಡಿ. ಅವರು ದೇವರ ಮಕ್ಕಳು. ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ರಂತಹ ತಂದೆ ತಾಯಿ ಪಡೆದ ಶಕ್ತಿಧಾಮ ಮಕ್ಕಳು ಬಹಳ ಪುಣ್ಯವಂತರು. ನನ್ನ ಮಂಡಿಸಿದೆ ಬಜೆಟ್ ಅಂತಃಕರಣ ದಿಂದ ಕೂಡಿದೆ. ಮೈಸೂರು ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆ ಗೆ 185 ಕೋಟಿ ರೂ ಮೀಸಲು ಇಟ್ಟಿದ್ದೇವೆ’ ಎಂದರರು. ಇದೇ ಸಂದರ್ಭದಲ್ಲಿ ಶಕ್ತಿಧಾಮಕ್ಕೆ 5 ಕೋಟಿ ರೂ ವಿಶೇಷ ಅನುದಾನ ಘೋಷಣೆ ಮಾಡಿದರು.