CinemaLatestMain PostSandalwood

ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣದ ಉತ್ತರಕಾಂಡ ಸಿನಿಮಾಗೆ ಶಿವರಾಜ್ ಕುಮಾರ್ ಹೀರೋ?

ಇಂದು ಸಂಜೆ 4.47ಕ್ಕೆ ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿ ಹೊಸ ಸುದ್ದಿಯನ್ನು ಕೊಡುವುದಾಗಿ ಘೋಷಣೆ ಮಾಡಿತ್ತು. ಅಂದುಕೊಂಡಂತೆ ಪೋಸ್ಟರ್ ರಿಲೀಸ್ ಮಾಡಿದೆ. ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶಕರು. ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಜನವರಿ 2023ರಿಂದ ಈ ಸಿನಿಮಾ ಶುರುವಾಗಲಿದೆ.

ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಮೂಡಿಸುವಂತಹ ಪೋಸ್ಟರ್ ವೊಂದನ್ನು ಶೇರ್ ಮಾಡಿದ್ದರು ನಿರ್ಮಾಪಕ ಕಾರ್ತಿಕ್. ಈ ಪೋಸ್ಟರ್ ನಲ್ಲಿ ‘ಅವ್ನಪ್ನ, ಮಿರ್ಚಿ, ಮಂಡಕ್ಕಿ, ಮಾಲ್ಪುರಿ, ಮಂಡಗಿ, ಕುಂದಾ, ಪೇಡಾ, ಅರ್ಧ ಎಗ್ ರೈಸ್, ಉಳ್ಳಾಗಡ್ಡಿ, ಬದ್ನಿಕಾಯ್ ಬನ್ಇ, ಬುಲ್ಲೆಟ್ಟು, ಬಾಂಬು ಬಂದುಕು’ ಎಂದು ಪೋಸ್ಟರ್ ನಲ್ಲಿ ಬರೆಯಿಸಲಾಗಿತ್ತು. ಅಲ್ಲಿಗೆ ಈ ಸಿನಿಮಾ ಭೀಮಾ ತೀರದಲ್ಲಿ ನಡೆದ ಅಥವಾ ಆ ಪ್ರದೇಶದಲ್ಲಿ ನಡೆಯುವ ಕಥೆ ಎಂದು ಹಿಂಟ್ ಕೊಟ್ಟಿತ್ತು. ಇದು ಅದೇ ಭಾಗದ ಕಥೆ ಎನ್ನುವುದು ಗೊತ್ತಾಗಿದೆ.

ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ರೋಹಿತ್ ಪದಕಿ, ಈ ಬಾರಿ ಉತ್ತರ ಕರ್ನಾಟಕ ಗ್ಯಾಂಗ್ ಸ್ಟರ್ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಬೈರಾಗಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಅವರು ಕೂಡ ಸಣ್ಣದೊಂದು ಸುಳಿವು ಕೊಟ್ಟಿದ್ದರು. ಹೀಗಾಗಿ ಈ ಸಿನಿಮಾದ ಹೀರೋ ಶಿವರಾಜ್ ಕುಮಾರ್ ಎನ್ನುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

ಇನ್ನೂ ಆರೇಳು ತಿಂಗಳ ನಂತರ ಈ ಸಿನಿಮಾದ ಶೂಟಿಂಗ್ ಶುರುವಾಗುವುದರಿಂದ, ನಂತರದ ದಿನಗಳಲ್ಲಿ ಸಿನಿಮಾದ ಹೀರೋ ಯಾರು ಎನ್ನುವುದನ್ನು ಬಹಿರಂಗ ಪಡಿಸಬಹುದು. ಅಥವಾ ಮುಂದಿನ ತಿಂಗಳು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅಂದು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ನಾಯಕನ ಅಧಿಕೃತ ಘೋಷಣೆ ಮಾಡಬಹುದು.

Live Tv

Leave a Reply

Your email address will not be published.

Back to top button