ಇಂದು ಸಂಜೆ 4.47ಕ್ಕೆ ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿ ಹೊಸ ಸುದ್ದಿಯನ್ನು ಕೊಡುವುದಾಗಿ ಘೋಷಣೆ ಮಾಡಿತ್ತು. ಅಂದುಕೊಂಡಂತೆ ಪೋಸ್ಟರ್ ರಿಲೀಸ್ ಮಾಡಿದೆ. ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶಕರು. ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಜನವರಿ 2023ರಿಂದ ಈ ಸಿನಿಮಾ ಶುರುವಾಗಲಿದೆ.
Advertisement
ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಮೂಡಿಸುವಂತಹ ಪೋಸ್ಟರ್ ವೊಂದನ್ನು ಶೇರ್ ಮಾಡಿದ್ದರು ನಿರ್ಮಾಪಕ ಕಾರ್ತಿಕ್. ಈ ಪೋಸ್ಟರ್ ನಲ್ಲಿ ‘ಅವ್ನಪ್ನ, ಮಿರ್ಚಿ, ಮಂಡಕ್ಕಿ, ಮಾಲ್ಪುರಿ, ಮಂಡಗಿ, ಕುಂದಾ, ಪೇಡಾ, ಅರ್ಧ ಎಗ್ ರೈಸ್, ಉಳ್ಳಾಗಡ್ಡಿ, ಬದ್ನಿಕಾಯ್ ಬನ್ಇ, ಬುಲ್ಲೆಟ್ಟು, ಬಾಂಬು ಬಂದುಕು’ ಎಂದು ಪೋಸ್ಟರ್ ನಲ್ಲಿ ಬರೆಯಿಸಲಾಗಿತ್ತು. ಅಲ್ಲಿಗೆ ಈ ಸಿನಿಮಾ ಭೀಮಾ ತೀರದಲ್ಲಿ ನಡೆದ ಅಥವಾ ಆ ಪ್ರದೇಶದಲ್ಲಿ ನಡೆಯುವ ಕಥೆ ಎಂದು ಹಿಂಟ್ ಕೊಟ್ಟಿತ್ತು. ಇದು ಅದೇ ಭಾಗದ ಕಥೆ ಎನ್ನುವುದು ಗೊತ್ತಾಗಿದೆ.
Advertisement
Advertisement
ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ರೋಹಿತ್ ಪದಕಿ, ಈ ಬಾರಿ ಉತ್ತರ ಕರ್ನಾಟಕ ಗ್ಯಾಂಗ್ ಸ್ಟರ್ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಬೈರಾಗಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಅವರು ಕೂಡ ಸಣ್ಣದೊಂದು ಸುಳಿವು ಕೊಟ್ಟಿದ್ದರು. ಹೀಗಾಗಿ ಈ ಸಿನಿಮಾದ ಹೀರೋ ಶಿವರಾಜ್ ಕುಮಾರ್ ಎನ್ನುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
Advertisement
ಇನ್ನೂ ಆರೇಳು ತಿಂಗಳ ನಂತರ ಈ ಸಿನಿಮಾದ ಶೂಟಿಂಗ್ ಶುರುವಾಗುವುದರಿಂದ, ನಂತರದ ದಿನಗಳಲ್ಲಿ ಸಿನಿಮಾದ ಹೀರೋ ಯಾರು ಎನ್ನುವುದನ್ನು ಬಹಿರಂಗ ಪಡಿಸಬಹುದು. ಅಥವಾ ಮುಂದಿನ ತಿಂಗಳು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅಂದು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ನಾಯಕನ ಅಧಿಕೃತ ಘೋಷಣೆ ಮಾಡಬಹುದು.