ಇಂದು ಡಾ.ಶಿವರಾಜ್ ಕುಮಾರ್ ಅವರ 60ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಅವರು ಹುಟ್ಟು ಹಬ್ಬ ಆಚರಿಸದೇ ಇದ್ದರೂ, ಅಭಿಮಾನಿಗಳು ಮತ್ತು ವಿವಿಧ ಸಿನಿಮಾ ತಂಡಗಳು ಸಾರ್ಥಕ ರೀತಿಯಲ್ಲಿ ಬರ್ತಡೇ ಆಚರಿಸುತ್ತಿವೆ. ಬೆಳಗ್ಗೆಯಿಂದಲೇ ನಾನಾ ರಂಗದ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಹೇಳಿದ್ದಾರೆ.
Advertisement
ಈ ಹುಟ್ಟು ಹಬಕ್ಕಾಗಿ ಶಿವರಾಜ್ ಕುಮಾರ್ ನಟನೆಯ ಹಲವು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿವೆ. ಅಲ್ಲದೇ, ಕೆಲ ಸಿನಿಮಾಗಳ ಟೈಟಲ್ ಕೂಡ ಲಾಂಚ್ ಮಾಡಲಾಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಶಿವರಾಜ್ ಕುಮಾರ್ ನಟನೆಯ ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದ್ದು, ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರೇ ಟೈಟಲ್ ಘೋಷಣೆ ಮಾಡಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನ ನಾಗಾರ್ಜುನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇನ್ ಟೈಟಲ್ ಲಾಂಚ್ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್
Advertisement
Advertisement
ಶ್ರೀ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಮತ್ತು ಪ್ರಭುದೇವ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಹೊಸ ಸಿನಿಮಾ ಹಾಗೂ ಸಚಿನ್ ಆರ್ ಅವರ ಹೊಸ ಸಿನಿಮಾದ ಪೋಸ್ಟರ್ ಗಳು ಕೂಡ ಇಂದು ಬಿಡುಗಡೆ ಆಗಿವೆ. ಅಲ್ಲದೇ ವಿಶೇಷವಾಗಿ ಉಪೇಂದ್ರ ನಟನೆಯ ಯುಐ ಸಿನಿಮಾ ಕೂಡ ಇಂದು ಶಿವಣ್ಣ ಅವರಿಗೆ ವಿಶ್ ಮಾಡಿ ಜಾಹೀರಾತು ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಸಿನಿಮಾದಲ್ಲಿ ಏನಾದರೂ ಶಿವಣ್ಣ ಇರುತ್ತಾರಾ? ಕಾದು ನೋಡಬೇಕು.
Advertisement
ಶಿವಣ್ಣ ವಾಸಿಸುವ ಮಾನ್ಯತಾ ಟೆಕ್ ಪಾರ್ಕ್ ಹಿಂದಿನ ಸರ್ಕಲ್ ಗೆ ಅಲ್ಲಿನ ನಿವಾಸಿಗಳೆಲ್ಲರೂ ಸೇರಿ ಶಿವರಾಜ್ ಕುಮಾರ್ ಸರ್ಕಲ್ ಎಂದು ಹೆಸರು ಇಟ್ಟಿದ್ದಾರೆ. ಈ ಏರಿಯಾಗಾಗಿ ಅವರು ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾರಂತೆ. ಹಾಗಾಗಿ ಸರ್ಕಲ್ ಗೆ ಇವರ ಹೆಸರನ್ನೂ ಇಡಲಾಗಿದೆ.