ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

Public TV
2 Min Read
Raichur idol

ರಾಯಚೂರು: ಜಿಲ್ಲೆಯ ದೇವಸುಗೂರು (Devarsugur) ಬಳಿಯ ಕೃಷ್ಣಾ ನದಿಯಲ್ಲಿ (Krishna River) ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು (Idols) ಹಾಗೂ ಶಿವಲಿಂಗ ಪತ್ತೆಯಾಗಿದೆ. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ.

ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ. ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಎಂದು ಊಹಿಸುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ – ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸಲಾಗದು ಎಂದ ಕೋರ್ಟ್

Raichur

ಸಾಮಾನ್ಯವಾಗಿ ಮುಕ್ಕಾದ ದೇವರ ಮೂರ್ತಿಗಳು, ದೇವಾಲಯಗಳಲ್ಲಿನ ಹಳೆ ಮೂರ್ತಿಗಳನ್ನು ಬದಲಾಯಿಸಿದಾಗ ಮೂಲ ಮೂರ್ತಿಗಳನ್ನ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಅಂತಹ ಮೂರ್ತಿಗಳನ್ನು ಪೂಜೆಗೆ ಬಳಸುವುದಿಲ್ಲ. ಅದೇ ರೀತಿ ಈ ಮೂರ್ತಿಗಳನ್ನೂ ನೂರಾರು ವರ್ಷಗಳ ಹಿಂದೆ ಕೃಷ್ಣಾ ನದಿಯಲ್ಲಿ ವಿಸರ್ಜಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಸುತ್ತಮುತ್ತ ಎಲ್ಲೂ ವಿಷ್ಣು ದೇವಾಲಯವಾಗಲಿ ಅಥವಾ ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಲ್ಲ. ಹೀಗಾಗಿ ಈ ಮೂರ್ತಿಗಳು ಇಲ್ಲಿಗೆ ಹೇಗೆ ಬಂದವು. ಇಲ್ಲೇ ದೇವಾಲಯವೇನಾದರೂ ಇತ್ತಾ ಎನ್ನುವ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

ಮೂರುವರೆ ಅಡಿಯ ಪುರಾತನ ಶಿಲ್ಪಕಲಾ ಶೈಲಿಯ ವಿಷ್ಣು ಮೂರ್ತಿಯನ್ನು ಸದ್ಯ ನದಿ ಪಕ್ಕದ ಕನಕಾದುರ್ಗ ದೇವಾಲಯ ಕಟ್ಟೆ ಮೇಲೆ ಇಡಲಾಗಿದ್ದು, ಪೂಜೆ ಸಲ್ಲಿಸಲಾಗುತ್ತಿದೆ. ಉಳಿದ ಎರಡು ನದಿ ದಂಡೆಯಲ್ಲೇ ಇವೆ. ಕನಕದುರ್ಗಾ ಮೂರ್ತಿಯೂ ಸಹ ಈ ಹಿಂದೆ ನದಿಯಲ್ಲಿ ಸಿಕ್ಕಿದ್ದು ಇಲ್ಲಿನ ಇನ್ನೊಂದು ವಿಶೇಷ. ಆದರೆ ನದಿಯಲ್ಲಿ ಈ ಮೂರ್ತಿಗಳು ಬಂದದ್ದಾದರೂ ಹೇಗೆ ಎನ್ನುವುದು ಸದ್ಯದ ಕುತೂಹಲ. ಪುರಾತತ್ವ ಇಲಾಖೆ ಈ ಮೂರ್ತಿಗಳನ್ನ ಪರಿಶೀಲನೆಗೆ ಒಳಪಡಿಸಿ ಸಂರಕ್ಷಿಸಬೇಕಿದೆ. ಇದನ್ನೂ ಓದಿ: ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!

Share This Article