ತುಮಕೂರು: ವ್ಯಕ್ತಿಯೊಬ್ಬರು ಗುಜರಿ ವ್ಯಾಪಾರದಿಂದಲೇ ಕೋಟ್ಯಾಧೀಶನಾಗಿದ್ದು, ಇದರ ಜೊತೆಗೆ ತಾನು ಎಂಎಲ್‍ಎ ಆಗಬೇಕು ಎಂದು ಕನಸು ಕಂಡು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.
ಜಿಲ್ಲೆಯ ತಿಪಟೂರಿನ ಸಂತೋಷ್ ಭೈರಾಟೆ ಶಿವಸೇನಾ ಅಭ್ಯರ್ಥಿಯಾಗಿ ತಿಪಟೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ. ಹಿಂದುತ್ವದ ಅಜೆಂಡಾ ಹಿಡಿದುಕೊಂಡು ಮತಬೇಟೆ ಮಾಡುತ್ತಿದ್ದಾರೆ. ತಮ್ಮದೆ ಆದ ಯುವಕರ ತಂಡ ಕಟ್ಟಿಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
Advertisement
ಸಂತೋಷ್ ಭೈರಾಟೆ ಕಳೆದ ಹತ್ತು ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಈ ವ್ಯಾಪಾರದಿಂದಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡಿ ರಾಜಕೀಯಕ್ಕೆ ಧುಮುಕಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಸ್ಥಿರ ಹಾಗೂ ಚರಾಸ್ಥಿಯನ್ನು 1.2 ಕೋಟಿ ರೂ. ಎಂದು ಘೋಷಿಸಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಸಂತೋಷ್ ಭೈರಾಟೆ, ಈ ಬಾರಿ ತಿಪಟೂರಿನ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನಾ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಚಹಾ ಮಾರಿ ಪ್ರಧಾನಿ ಆಗಿದ್ದಾರೆ ಅಂದರೆ ನಾನು ಗುಜರಿ ವ್ಯಾಪಾರ ಮಾಡಿ ಮೇಲೆ ಬಂದಿದ್ದೇನೆ. ಆದ್ದರಿಂದ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ತಮ್ಮ ತಂಡದ ಅಭ್ಯರ್ಥಿಗಳೇ ಸ್ಫೂರ್ತಿಯಾಗಿದ್ದಾರೆ. ನಮ್ಮ ತಂಡದ ಯುವಕರಿಗೆ ಬೆಂಬಲಿಸಿ ಅಂತ ಹೇಳಿ ಮತದಾರರ ಬಳಿ ಮನವಿ ಮಾಡಿಕೊಂಡಿದ್ದಾರೆ ಅಂತ ಹೇಳಿದ್ರು.
Advertisement