ಶುಕ್ರವಾರ ಶಿವರಾತ್ರಿ ಆಚರಣೆಗೆ ಸಿದ್ಧತೆಗಳು ಮನೆಯಲ್ಲಿ ಆರಂಭಗೊಂಡಿರುತ್ತವೆ. ಶಿವರಾತ್ರಿ ಅಂದ್ರೆ ಉಪವಾಸ ವ್ರತ ಆಚರಣೆ ಇದ್ದೇ ಇರುತ್ತದೆ. ಕಳೆದ ಕೆಲ ದಿನಗಳಿಂದಲೂ ಬಿಸಿಲು ಹೆಚ್ಚಾಗ್ತಾನೆ ಇದೆ. ಹಾಗಾಗಿ ಉಪವಾಸ ವ್ರತ ಆಚರಣೆ ಸ್ವಲ್ಪ ಕಷ್ಟವಾಗಬಹುದು. ಶಿವನ ಭಕ್ತರಿಗೆ ಈ ಉಪವಾಸ ವ್ರತ ಆಚರಣೆಯಲ್ಲಿ ನೆಮ್ಮದಿಯ ಭಾವ ಇರುತ್ತದೆ. ಆದ್ರೂ ಉಪವಾಸದ ಬಳಿಕ ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಿವರಾತ್ರಿಗಾಗಿ ವಿಶೇಷ ಫ್ರೂಟ್ ಸಲಾಡ್ ಮಾಡಿ ಹಬ್ಬವನ್ನು ಆರೋಗ್ಯಕರವಾಗಿ ಆಚರಿಸಿ.
ಬೇಕಾಗುವ ಪದಾರ್ಥಗಳು
* ಸೀಬೆ ಹಣ್ಣು
* ಅನಾನಸ್
* ದಾಳಿಂಬೆ
* ಸ್ವೀಟ್ ಕಾರ್ನ್
* ಆಪಲ್
* ಪೆಪ್ಪರ್ ಪೌಡರ್
* ಉಪ್ಪು
* ನಿಂಬೆ ಹಣ್ಣಿನ ರಸ
* ಕಾಯಿ ತುರಿ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿದ ಸೀಬೆಹಣ್ಣು, ಸಣ್ಣಗೆ ಹೆಚ್ಚಿದ ಅನಾನಸ್(ಪೈನಾಪಲ್), ಸಣ್ಣಗೆ ಹೆಚ್ಚಿದ ಆಪಲ್, ಸ್ವೀಟ್ ಕಾರ್ನ್, ದಾಳಿಂಬೆಯನ್ನು ಸೇರಿಸಿ ಮಿಕ್ಸ್ ಮಾಡಿ.
* ಈಗ ಮಿಶ್ರಣಕ್ಕೆ ಪೆಪ್ಪರ್ ಪೌಡರ್, ಉಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ.
* ಬಳಿಕ ಸರ್ವ್ ಮಾಡುವಾಗ ಕಾಯಿ ತುರಿ ಸೇರಿಸಿ ಸರ್ವ್ ಮಾಡಿ..
(ಬೇಕಿದ್ದಲ್ಲಿ ಇದಕ್ಕೆ ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಬಹುದು)
Advertisement