Saturday, 21st July 2018

Recent News

ಇಶಾ ಫೌಂಡೇಷನ್ ನಲ್ಲಿ ಶಿವರಾತ್ರಿ ಸಂಭ್ರಮ – ಆಹೋರಾತ್ರಿ ಕಾರ್ಯಕ್ರಮ

ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ ಮಹಾ ಶಿವರಾತ್ರಿ ಆಚರಣೆ ಆರಂಭವಾಗಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಗುತ್ತದೆ. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿ ಕಾರ್ಯಕ್ರಮವನ್ನು ನೀಡಲಿದ್ದಾರೆ.

ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

Leave a Reply

Your email address will not be published. Required fields are marked *