ಬೆಳಗಾವಿ: ನಮ್ಮ ಸಹೋದರ ಮತ್ತು ಆತನ ಪತ್ನಿ ಅಕ್ಕನ ಮಗನಿಂದಲೇ ನನ್ನ ಮೇಲೆ 5 ಸುತ್ತು ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದು ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದಿಂದ ನಾನು ಬದುಕಿದ್ದೇನೆ. ನಿನ್ನೆ ಸಂಜೆ 7.30ರ ಸುಮಾರಿಗೆ ನನ್ನ ಮೇಲೆ ಸಂಬಂಧಿಕರರಿಂದಲೇ ಗುಂಡಿನ ದಾಳಿ ಆಗಿದೆ. ನಮ್ಮ ಸಹೋದರ ಮತ್ತು ಆತನ ಹೆಂಡತಿ ಅಕ್ಕನ ಮಗ ಸೇರಿ ನನ್ನ ಮೇಲೆ 5 ಸುತ್ತು ಗುಂಡಿನ ದಾಳಿ ಮಾಡಿದ್ದಾರೆ. ಅದೃಷ್ಟವಶಾತ್ ನನಗೆ ಯಾವುದೇ ಗುಂಡು ತಗುಲಿಲ್ಲ. ಆದರೆ ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಇದನ್ನ ನಾನು ಖಂಡಿಸುತ್ತೇನೆ ಎಂದರು.
ಘಟನೆ ನಡೆದ ಬಳಿಕ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗಿ ಕೆಲಸ ಮಾಡಿದೆ. ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಇಂದು ಬಂಧಿಸುವ ಭರವಸೆಯನ್ನೂ ಪೊಲೀಸರು ನೀಡಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ 90ರ ದಶಕದಲ್ಲಿ ಅಮೃತ ಸಿಂಧು, ರಾಜಾ ರಾಣಿ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರನಟಿ ಶೃತಿ ಅಭಿನಯದ ಅಮೃತ ಸಿಂಧು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಇದನ್ನೂ ಓದಿ: ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್
ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಫೈರಿಂಗ್‍ಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಕಾರಣರಾದ ಆರೋಪಿಗಳ ಪತ್ತೆಗೆ ಪೆÇಲೀಸರು ಬಲೆಬೀಸಿದ್ದರು. ಸದ್ಯ ಓರ್ವ ಆರೋಪಿಯನ್ನ ಬಂಧಿಸಿರುವುದಾಗಿ ತಿಳಿದುಬಂದಿದೆ.