ಮಂಡ್ಯ: ಕಾಂಗ್ರೆಸ್ ಪಕ್ಷದ ಒಳ ಜಗಳದಿಂದಾಗಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಬೇಕಾಯ್ತು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ನ ಎಲ್.ಆರ್.ಶಿವರಾಮೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ನೂತನ ಉಸ್ತುವಾರಿ ಸಚಿವರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಬೇಕಾಯಿತು ಎಂದು ಹೇಳುವ ಮೂಲಕ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
Advertisement
ರಮ್ಯಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಶಿವರಾಮೇಗೌಡರು, ರಮ್ಯಾ ಹೆಸರನ್ನು ಹೇಳದೇ ಫ್ಲೈಯಿಂಗ್ ಸ್ಟಾರ್ ಹೆಸರಿನಿಂದ ಕರೆದು ಅವರ ಸೋಲಿಗೆ ಕಾರಣವನ್ನು ತಿಳಿಸಿದ್ದಾರೆ.
Advertisement
ಈ ಹಿಂದೆ ಸಚಿವ ಪುಟ್ಟರಾಜು ಎಂಪಿಗೆ ನಿಂತಿದ್ದಾಗ ನಮ್ಮ ಪಕ್ಷದಿಂದ ಫ್ಲೈಯಿಂಗ್ ಸ್ಟಾರ್ ಚುನಾವಣೆಗೆ ನಿಂತಿದ್ದರು. ಈ ಫ್ಲೈಯಿಂಗ್ ಸ್ಟಾರ್ ಕೈಗೆ ಮಂಡ್ಯ ಜಿಲ್ಲೆ ಕೊಡಬಾರದು ಅಂತಾ ಡಿಸೈಡ್ ಮಾಡಿ ಪಕ್ಷದ ವಿರುದ್ಧವಾಗಿ ಕೆಆರ್‍ಎಸ್‍ನಲ್ಲಿ ಸಭೆ ಕರೆದಿದ್ದೆ. ಇದರಿಂದಾಗಿ ಪಕ್ಷದಿಂದ ದೂರಾದೆ. ಒಂದು ಲೆಟರ್ ತೆಗೆದುಕೊಳ್ಳಲು ಫ್ಲೈಯಿಂಗ್ ಸ್ಟಾರ್ ಹಿಂದೆ ಬೆಂಗಳೂರಲ್ಲಿ ಸುತ್ತುವುದು ತಪ್ಪಬೇಕು ಎನ್ನುವ ಕಾರಣಕ್ಕಾಗಿ ನಾನು ಸಭೆ ನಡೆಸಿದ್ದೆ ಅಷ್ಟೇ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews