Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಮಲತಾ ವಿರುದ್ಧದ ವಾಗ್ದಾಳಿಗೆ ಶಿವರಾಮೇಗೌಡ ಸ್ಪಷ್ಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸುಮಲತಾ ವಿರುದ್ಧದ ವಾಗ್ದಾಳಿಗೆ ಶಿವರಾಮೇಗೌಡ ಸ್ಪಷ್ಟನೆ

Bengaluru City

ಸುಮಲತಾ ವಿರುದ್ಧದ ವಾಗ್ದಾಳಿಗೆ ಶಿವರಾಮೇಗೌಡ ಸ್ಪಷ್ಟನೆ

Public TV
Last updated: April 2, 2019 12:01 pm
Public TV
Share
3 Min Read
mnd shivaramegowda 1
SHARE

– ಅಂಬಿ, ಸುಮಲತಾ ಬಗ್ಗೆ ಗೌರವವಿದೆ
– ರಮ್ಯಾ ವಿರುದ್ಧವೂ ಗರಂ
– ನಿಖಿಲ್‍ಗೂ ಎಚ್ಚರಿಕೆ

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಗೌಡ್ತಿ ಅಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಸಂಸದ ಎಲ್.ಆರ್ ಶಿವರಾಮೇ ಗೌಡರು ಸುಮಲತಾಳ ಗಂಡನನ್ನು ನಂಬಿ ನಾನು ಕೆಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸ್ಪಷ್ಟನೆ ಕೂಡ ನೀಡಿದ್ದಾರೆ.

ತನ್ನ ಹೇಳಿಕೆ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾರ ಮೇಲೂ ಪರ್ಸನಲ್ ಆಗಿ ಮಾತನಾಡುವುದಿಲ್ಲ. ನನಗೆ ಸುಮಲತಾ ಅವರ ಬಗ್ಗೆ ಸಹೋದರತ್ವ ಸಂಬಂಧದ ಭಾವನೆಯಿದೆ. ಅಂಬರೀಶ್ ಅವರನ್ನು ನಮ್ಮಣ್ಣ, ನಾನು ಅಂಬಿ ಅಣ್ಣನ ಅಭಿಮಾನಿ ಎಂದು ಹೇಳುತ್ತಾರೆ. ಆದರೆ ಅಂಬರೀಶ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಎಲೆಕ್ಷನ್‍ನಲ್ಲಿ ನಿಲ್ಲಿಸುವವರೆಗೂ ಅವರನ್ನು ನಾವು ಚೆನ್ನಾಗಿ ನೋಡಿಕೊಂಡಿದ್ದೇವೆ. ಹೀಗಾಗಿ ನಾವು ಕೂಡ ಅಂಬರೀಶ್ ಅವರ ಸ್ನೇಹಿತರೇ ಎಂದು ಸ್ಪಷ್ಟಪಡಿಸಿದ್ದಾರೆ.

ಅಂಬರೀಶ್ ಅವರನ್ನು ಚಿತ್ರರಂಗದಲ್ಲಿ ನಟನಾಗಿ ಇಷ್ಟಪಡುತ್ತೇನೆಯೇ ಹೊರತು ರಾಜಕೀಯವಾಗಿ ಒಪ್ಪುತ್ತಿಲ್ಲ. ಅವರು ಒಳ್ಳೆಯ ಮನಸ್ಸಿನ ವ್ಯಕ್ತಿ. ರಾಜಕೀಯವಾಗಿ 20 ವರ್ಷ ಹಿಂದಿನ ಕಥೆ ಮಂಡ್ಯದಲ್ಲಿ ಚರ್ಚೆ ಆಗಬೇಕು. 20 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಸುಮಲತಾ ಅವರು ಅಂಬರೀಶ್ ಅವರ ಧರ್ಮಪತ್ನಿ ಆಗಿದ್ದರು. ಅವರು ರಾಜಕೀಯಕ್ಕೆ ಬರುವುದಾದರೆ ಆಗಲೇ ಬರಬಹುದಿತ್ತು. ಈಗ ಏಕೆ ಬಂದಿದ್ದಾರೆ ಎಂದು ಪ್ರಶ್ನಿಸಿದ್ರು.

SUMALATHA A 1

ಅಂಬರೀಶ್ ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬಂದಿದ್ದು ನಾನೇ. ನಾನು ಆಗ ಚುನಾವಣೆಯಲ್ಲಿ ನಿಂತಿಲ್ಲ ಅಂದರೆ ಅಂಬರೀಶ್ ಅವರು ಗೆಲ್ಲುತ್ತಿದ್ದರು. ನಾನು ಆಗ ಚುನಾವಣೆಯಲ್ಲಿ ನಿಂತಿದ್ದರಿಂದ ಅಂಬರೀಶ್ ಸೋತಿದ್ದರು. ಚುನಾವಣೆಯಲ್ಲಿ ನಿಂತ ಬಳಿಕವೂ ನಾವು ಚೆನ್ನಾಗಿಯೇ ಇದ್ದೆವು. ಆಗ ಅವರ ಆಶೀರ್ವಾದ ತೆಗೆದುಕೋ ಎಂದು ಯಾರೋ ಹೇಳಿದ್ದರು. ಅಂಬರೀಶ್ ಅವರು ನಿಧನ ಹೊಂದುವ 2 ದಿನದ ಹಿಂದೆ ಅವರ ಅಣ್ಣನ ಮಗ ಮಧು, ನಾನು ಅಂಬರೀಶ್ ರನ್ನು ಭೇಟಿ ಮಾಡಿದೆ ಎಂದರು.

ನನಗೆ ಅಂಬರೀಶ್ ಅವರ ಬಗ್ಗೆ ವೈಯಕ್ತಕವಾಗಿ ಗೌರವವಿದೆ. ಅವರು ಬಹಳ ದೊಡ್ಡ ಮನುಷ್ಯ. ಮಂಡ್ಯ ಜಿಲ್ಲೆಯಲ್ಲಿ ಅವರು ರಾಜಕೀಯವಾಗಿ ಏನೂ ಮಾಡಿಲ್ಲ. ಚಿತ್ರನಟರಾದ ದರ್ಶನ್, ಯಶ್ ಹಾಗೂ ಬೇರೆಯವರು ಚುನಾವಣೆ ಸಮಯದಲ್ಲಿ ಬರುತ್ತಾರೆ. ಆಗ ಜನರು ಅವರ ಮಾತು ಕೇಳಿ ಮತ ಹಾಕುತ್ತಾರೆ. ಸುಮಲತಾ ಮಂಡ್ಯದಲ್ಲಿ ಮನೆ ಮಾಡಿದ್ದರು. ಅದು ಅವರ ಲಕ್ಕಿ ಮನೆ. ಆದರೆ ಸುಮಲತಾ ಅವರು ಇದುವರೆಗೂ ಆ ಮನೆಯಲ್ಲಿ ವಾಸವಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

Ambareesh

ನನಗೂ ಸುಮಲತಾ ಅವರ ಬಗ್ಗೆ ಗೌರವವಿದೆ. ಸುಮಲತಾ ಅವರು ಮಂಡ್ಯದಲ್ಲಿ ಬದಲಾವಣೆ ಬಯಸಿದ್ದು, ಚುನಾವಣೆಗೆ ಅಲ್ಲ. ಅಂಬರೀಶ್ ನಿಧನರಾದಾಗ ಸುಮಲತಾ ಜನರನ್ನು ನೋಡಿದ್ದಾರೆ. ಕುಮಾರಸ್ವಾಮಿ ಮೆರವಣಿಗೆ ಮಾಡುವಾಗ ಜನರನ್ನು ನೋಡಿದ್ದಾರೆ. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಇಂದು ಈ ಪ್ಲಾನ್ ಹಾಕಿದ್ದಾರೆ. ಈ ಚುನಾವಣೆ ನಡೆದ ನಂತರ ಯಾರೂ ಬರುವುದಿಲ್ಲ. ರಮ್ಯಾಗೆ ಕೊಡೋಣ ಎಂದು ನಾನು ಹೇಳಿದೆ. ಆದರೆ ರಮ್ಯಾ ಕೂಡ ಹೀಗೆ ಮನೆ ಮಾಡಿ ಬಳಿಕ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಹೋಗಿದ್ದಾರೆ ಎಂದು ರಮ್ಯಾ ವಿರುದ್ಧವೂ ಸಂಸದರು ಗರಂ ಆದ್ರು.

ಅಂಬರೀಶ್ ಅವರನ್ನು ಚಲನಚಿತ್ರರಂಗದ ವ್ಯಕ್ತಿ ಹಾಗೂ ಆತ್ಮೀಯ ವ್ಯಕ್ತಿಯಾಗಿ ನನಗೆ ಗೌರವವಿದೆ. ಸುಮಲತಾಗು ರಾಜಕೀಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಸುಮಲತಾ ಇಷ್ಟು ದಿನ ಏನು ಮಾಡುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ನಾನು ಒಬ್ಬ ಪ್ರಜೆ. ವೈಯಕ್ತಿಕವಾಗಿ ನನಗೂ ಸಮಲತಾ ಅವರಿಗೂ ಯಾವ ಸಂಬಂಧನೂ ಇಲ್ಲ. ನನಗೆ ಈಗಲೂ ಅಂಬರೀಶ್ ಅವರ ಕುಟುಂಬದ ಬಗ್ಗೆ ಗೌರವವಿದೆ. ಅವರು ಚುನಾವಣೆಯಲ್ಲಿ ಗೆದ್ದರೆ ನಾನು ಏನೂ ಮಾತನಾಡಲ್ಲ. ಆದರೆ ಅವರು ಗೆಲ್ಲುವುದಕ್ಕೆ ಆಗಲ್ಲ. ಈ ಚುನಾವಣೆಯಲ್ಲಿ ಅವರು ಸೋತ ಬಳಿಕ ಅವರು ಮಂಡ್ಯದಲ್ಲಿ ಇರುತ್ತಾರಾ ಎಂಬುದನ್ನು ಕೇಳಿ ಎಂದು ಹೇಳಿದರು.

NiKHIL A

ಮಂಡ್ಯ ಜಿಲ್ಲೆ 20 ವರ್ಷ ನೆಲ ಕಚ್ಚಿದೆ. ಅಂಬರೀಶ್ ಅವರು ಚಲನಚಿತ್ರದಲ್ಲಿದ್ದರಿಂದ ಅವರಿಗೆ ಸುಮಾರು ಜನ ಅಭಿಮಾನಿಗಳಿದ್ದಾರೆ. ಕುಮಾರಸ್ವಾಮಿ ಅವರ ಮಗ ನಿಖಿಲ್ ಅವರು ಇನ್ಮುಂದೆ ಚಿತ್ರದಲ್ಲಿ ನಟಿಸಬಾರದು ಎಂದು ಈಗಾಗಲೇ ಕಂಡಿಷನ್ ಹಾಕಿದ್ದೇವೆ. ನಿಖಿಲ್ ತಪ್ಪು ಮಾಡುವ ರೀತಿ ನಟನೆ ಮಾಡಿದ್ದರೆ, ಅವರನ್ನು ಕೂಡ ವಿರುದ್ಧ ಮಾಡುತ್ತೇವೆ. 20 ವರ್ಷಗಳಿಂದ ಚಲನಚಿತ್ರ ನಟರ ಕೈಗಳಲ್ಲಿ ಸಿಕ್ಕಿ ಮಂಡ್ಯ ಜಿಲ್ಲೆಲ್ಲಿ ಅಭಿವೃದ್ಧಿ ಮಣ್ಣಾಗಿದೆ ಎಂದು ಕಿಡಿಕಾರಿದ್ರು.

ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ. ಅವರು ಮಂಡ್ಯದಲ್ಲಿ ಬಿದ್ದಿರಬೇಕು. ಸಿನಿಮಾ ಮಾಡಲು ಏನಾದರೂ ಹೋದರೆ ನಿಖಿಲ್‍ಗೂ ಕೂಡ ನಾವು ಕೊಕ್ ಕೊಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಶಿವರಾಮೇಗೌಡರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೂ ಎಚ್ಚರಿಕೆ ನೀಡಿದ್ದಾರೆ.

TAGGED:AmbareeshbengaluruClarificationnikhil kumaraswamyPublic TVshivaramegowdaSumalathaಅಂಬರೀಶ್ನಿಖಿಲ್ ಕುಮಾರಸ್ವಾಮಿಪಬ್ಲಿಕ್ ಟಿವಿಬೆಂಗಳೂರುಶಿವರಾಮೇಗೌಡಸುಮಲತಾಸ್ಪಷ್ಟನೆ
Share This Article
Facebook Whatsapp Whatsapp Telegram

Cinema news

Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood
Sanvi Sudeep
ಅರಿಶಿಣ ಶಾಸ್ತ್ರದಲ್ಲಿ ಸುದೀಪ್ ಪುತ್ರಿ – ಫೋಟೋ ವೈರಲ್
Cinema Latest Sandalwood Top Stories
Ratha Saptami Jeevan Moulya
ರಥಸಪ್ತಮಿ: ವಿಭಿನ್ನ ಧಾರಾವಾಹಿಗೆ ಸಾಕ್ಷಿಯಾದ ಉದಯ ಟಿವಿ
Cinema Latest TV Shows
Marali Manasagide Teaser Release
ಮರಳಿ ಮನಸಾಗಿದೆ ಚಿತ್ರದ ಟೀಸರ್ ರಿಲೀಸ್
Cinema Latest Sandalwood Top Stories

You Might Also Like

Sanchar Saathi
Latest

‘ಸಂಚಾರ್ ಸಾಥಿ’ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

Public TV
By Public TV
16 minutes ago
iqbal hussain
Districts

ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್

Public TV
By Public TV
33 minutes ago
Nikhil Kumaraswamy
Bengaluru City

ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಇಡ್ಲಿ, ನಾಟಿ ಕೋಳಿ ಸಾರು – ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಇರುತ್ತೇನೋ: ನಿಖಿಲ್ ಲೇವಡಿ

Public TV
By Public TV
38 minutes ago
Sharanprakash Patil Slovakia 1
Latest

ಸ್ಲೋವಾಕಿಯಾದಲ್ಲಿರುವ ಕರ್ನಾಟಕದ ಉದ್ಯೋಗಿಗಳೊಂದಿಗೆ ಡಾ. ಶರಣಪ್ರಕಾಶ್‌ ಪಾಟೀಲ್‌ ಸಂವಾದ

Public TV
By Public TV
47 minutes ago
Dharwad
Dharwad

ಧಾರವಾಡ | 3 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನ ಸ್ಮಶಾನಕ್ಕೆ ದಾನ ಕೊಟ್ಟ ಮಾಲೀಕ

Public TV
By Public TV
1 hour ago
Prajwal Revanna 2
Court

ಪ್ರಜ್ವಲ್‌ಗೆ ಮತ್ತೆ ಶಾಕ್ – ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿ ವಜಾ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?