– ನನ್ನ, ಎಚ್‍ಡಿಕೆ ನಡುವೆ ಸಣ್ಣ ವ್ಯತ್ಯಾಸಗಳಿವೆ
ಮಂಡ್ಯ: ರೇವಣ್ಣ ನಮ್ಮ ದೇವೇಗೌಡರ ಮಗ ಎನ್ನುವ ಕಾರಣಕ್ಕೆ ಸುಮ್ಮನಾಗುತ್ತೇನೆ. ಅಲ್ಲದೆ ರೇವಣ್ಣನವರು ಹಾಗೆ ಮಾತನಾಡುತ್ತಲೇ ಇರುತ್ತಾರೆ ಬಿಡಿ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹರಿಹಾಯ್ದಿದ್ದಾರೆ.
Advertisement
ಶಿವರಾಮೇಗೌಡರನ್ನು ಡಸ್ಟ್ ಬಿನ್ ಎಂದಿದ್ದ ಎಚ್.ಡಿ.ರೇವಣ್ಣನವರ ಹೇಳಿಕೆ ಕುರಿತು ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ರೇವಣ್ಣನವರು ಹಾಗೆ ಮಾತನಾಡುತ್ತಿರುತ್ತಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಡುವೆ ಸಣ್ಣ, ಪುಟ್ಟ ವ್ಯತ್ಯಾಸಗಳಿರುವುದು ನಿಜ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
ಕಾಂಗ್ರೆಸ್ ಸಭೆಯಲ್ಲಿ ಕಾಣಿಸಿಕೊಂಡ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಕಾಂಗ್ರೆಸ್ ಸಭೆಗೂ ಸಂಬಂಧವಿಲ್ಲ. ನಾನು ಯಾರನ್ನೋ ಭೇಟಿ ಮಾಡಲು ಹೋಗಿದ್ದೆ. ಅಲ್ಲಿ ಕಾಂಗ್ರೆಸ್ ಸಭೆ ನಡೆಯುತಿತ್ತು ಅಷ್ಟೇ. ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ನಾನು ಹಾಗೂ ಕುಮಾರಸ್ವಾಮಿ ಅಣ್ಣ-ತಮ್ಮಂದಿರಿದ್ದಂತೆ. ನನಗೆ ಮತ್ತೆ ಚುನಾವಣೆಗೆ ನಿಲ್ಲುವ ಆಸೆ ಇಲ್ಲ. ನಾನು ಜೆಡಿಎಸ್‍ನ ಸಕ್ರಿಯ ಸದಸ್ಯ, ಕುಮಾರಸ್ವಾಮಿ, ದೇವೇಗೌಡರೇ ನಮ್ಮ ನಾಯಕರು ಎಂದು ತಿಳಿಸಿದರು.
Advertisement
Advertisement
ನಾನು ಜೆಡಿಎಸ್ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಕುಮಾರಸ್ವಾಮಿಯವರು ನನ್ನ ಬಗ್ಗೆ ಮಾತನಾಡಲಿ. ಆದರೆ ನಾನು ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ನಾನು 20 ವರ್ಷ ಮಾಜಿ ಎಂಎಲ್‍ಎಯಾಗಿ ಕಾಲ ಕಳೆದಿದ್ದೇನೆ. ಹೀಗಿರುವಾಗ ಮತ್ತಷ್ಟು ವರ್ಷ ಮಾಜಿ ಎಂಪಿಯಾಗಿರುವುದು ಕಷ್ಟವೇ ನನಗೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ನನಗೆ 80 ರಷ್ಟು ಮತದಾನ ಮಾಡಿದರು. ಆದರೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಕಾಂಗ್ರೆಸ್ಸಿಗರು ಸ್ವಾಭಿಮಾನದ ಪರ ನಿಂತರು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪರ ಬ್ಯಾಟ್ ಮಾಡಿದರು.