Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ರಾಜೀನಾಮೆ ನೀಡಿರೋದಕ್ಕೆ ಕಾರಣ ಬಿಚ್ಚಿಟ್ಟ ಶಿವರಾಂ ಹೆಬ್ಬಾರ್

Public TV
Last updated: July 15, 2019 10:44 am
Public TV
Share
4 Min Read
shivaram hebbar 2
SHARE

ಕಾರವಾರ: ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಅವರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಪೇಸ್‍ಬುಕ್‍ನಲ್ಲಿ ಒಂದು ಸುರ್ದೀಘವಾದ ಪತ್ರ ಬರೆದಿದ್ದಾರೆ.

ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ ಇಂತಹ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ, ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಶಿವರಾಂ ಹೆಬ್ಬಾರ್ ಅವರು ಪತ್ರವನ್ನು ಬರೆಯಲು ಪ್ರಾರಂಭಿಸಿದ್ದಾರೆ.

rebel congress jds resigns B 1 1000x329 1

ಫೇಸ್‍ಬುಕ್ ಪೋಸ್ಟ್ ನಲ್ಲೇನಿದೆ?
ಮಾನ್ಯರೇ, ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನು ತರವಲ್ಲಿ ಯಶಸ್ಸು ಕಾಣಲಿಲ್ಲ. ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರು ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವದಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಂತೂ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನೂ ತೋರಲಿಲ್ಲ.

kwr shivaram hebbar

ನಮ್ಮದು ಮಲೆನಾಡು ಜಿಲ್ಲೆಗಳಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡ ಕ್ಷೇತ್ರ. ಕಾರ್ಯಕರ್ತರು, ಸಾರ್ವಜನಿಕರು, ವಿಶೇಷವಾಗಿ ನೀರಾವರಿ, ರಸ್ತೆಗಳು, ಆಸ್ಪತ್ರೆ ಹೀಗೆ ಹಲವು ಅರ್ಹ ಬೇಡಿಕೆ ಇದ್ದರೂ ಅದರ ಬಗ್ಗೆ ಸರ್ಕಾರದಿಂದ ಯಾವ ಬೆಂಬಲವೂ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಅಭಿವೃದ್ಧಿಯ ಹೆಸರಲ್ಲಿ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಮುಖ ತೋರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಬೆಂಬಲ ಸಿಗಲಿಲ್ಲ:
ನನ್ನ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡ ಮಾಹತ್ವಾಕಾಂಕ್ಷಿ ಯೋಜನೆಯಾದ ರೈತರಿಗೆ ಹಾಗೂ ಕೃಷಿಕರಿಗೆ ಅತ್ಯಂತ ಮಹತ್ವದ ಹಲವಾರು ಕೆರೆ ತುಂಬುವ ಹಾಗೂ ಏತ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುವುದಕ್ಕೆ ಹಾಗೂ ಮುಂದುವರಿದ ಎರಡನೇ ಹಂತದ ಯೋಜನೆಗೆ ಎಷ್ಟು ಬಾರಿ ಕೋರಿದರೂ ಈ ಸರ್ಕಾರದಿಂದ ಸರಿಯಾದ ಬೆಂಬಲ ಸಿಗಲಿಲ್ಲ. ರಾಜ್ಯಾದ್ಯಂತ ಬಿಜೆಪಿ ಅಲೆಯಿದ್ದರೂ ಅಭಿವೃದ್ಧಿಯನ್ನಷ್ಟೇ ಪರಿಗಣಿಸಿ ನನ್ನನ್ನು ಆರಿಸಿ ಕಳಿಸಿದ ನನ್ನ ಕ್ಷೇತ್ರದ ಜನರಿಗೆ ಯಾವ ಹೊಸ ಯೋಜನೆಗಳನ್ನೂ ತರಲಾಗದೆ ತಂದ ಯೋಜನೆಯನ್ನು ಜಾರಿಗೊಳಿಸದೆ, ಸಮರ್ಥಿಸಿಕೊಳ್ಳುವುದಾದರೂ ಹೇಗೆ? ಎಂದು ತನ್ನ ಅಳಲನ್ನು ಪೋಸ್ಟ್ ಮೂಲಕ ತೋಡಿಕೊಂಡಿದ್ದಾರೆ.

BJP 1

ನೀವೆಲ್ಲರೂ ನನ್ನನ್ನು 15-20 ವರ್ಷದಿಂದ ಹತ್ತಿರದಿಂದ ನೋಡಿದ್ದೀರಿ ಹಾಗೂ ನನ್ನ ವ್ಯಕ್ತಿತ್ವವನ್ನು ಬಲ್ಲಿರಿ. ಹಗಲು-ರಾತ್ರಿ ನನ್ನ ಪರವಾಗಿ ಹಲವಾರು ಚುನಾವಣೆಯಲ್ಲಿ ಶ್ರಮಿಸಿದ್ದೀರಿ. ನಿಮ್ಮ ಶ್ರಮವನ್ನು ನಾನೆಂದೂ ಮರೆಯಲಾರೆ. ನನ್ನ ಕಾರ್ಯಕರ್ತರ ಹಾಗೂ ಮತದಾರರ ಬೆಂಬಲದಿಂದ ಎರಡನೇ ಬಾರಿ ಶಾಸಕನಾಗಿದ್ದೇನೆ. ನನಗಿಂತ ಮೊದಲು ಈ ಪ್ರದೇಶಕ್ಕೆ ಬೇರೆಯವರು ಶಾಸಕರಾಗಿದ್ದಾರೆ ಹಾಗೂ ನನ್ನ ನಂತರವೂ ಆಗುತ್ತಾರೆ. ಆದರೆ ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕ್ಷೇತ್ರದ ಜನರಿಗೆ, ರೈತರಿಗೆ ಬಹುಕಾಲ ಮುಂದಿನ ಪೀಳಿಗೆಯೂ ನೆನಪಿಡುವಂತಹ ಶಾಶ್ವತ ಬೃಹತ್ ನೀರಾವರಿ ಯೋಜನೆಗಳನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇನೆ. ಬೆಲೆ ತೆತ್ತಾದರೂ ಅದನ್ನು ಪೂರ್ಣಗೊಳಿಸಿ ನನ್ನದೇ ಆದ ಅಭಿವೃದ್ಧಿಯ ಹೆಜ್ಜೆ ಗುರುತನ್ನು ಬಿಡುವ ಅಚಲ ವಿಶ್ವಾಸ ಹೊಂದಿದ್ದೇನೆ.

BL2601KARANATAKAPTI5252018000105A

ನೈತಿಕತೆಯನ್ನ ಮಾರಿಕೊಳ್ಳುವ ವ್ಯಕ್ತಿತ್ವ ಅಲ್ಲ:
ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು ಯಾವುದೇ ಹಣ, ಆಸೆ, ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ಖಂಡಿತವಾಗಿಯೂ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಪ್ರತಿದಿನ ಎರಡೂ ಪಕ್ಷಗಳ ನಾಯಕರ ಕಚ್ಚಾಟ ಹಾಗೂ ಸ್ವ-ಹಿತಾಸಕ್ತಿಗಳಿಂದಲೇ ಸುದ್ದಿಯಲಿತ್ತು. ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅದರ ಭಾಗವಾದ ನಾವು ಹಲವಾರು ಬಾರಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದ್ದೇವೆ. ಈ ಮೈತ್ರಿಯಿಂದ ಪಕ್ಷಕ್ಕೂ ಕೂಡ ಭರಿಸಲಾಗದ ಹಾನಿಯಾಗಿದೆ. ಇದೇ ರೀತಿ ಅಭಿವೃದ್ಧಿ ಇಲ್ಲದೇ ಮಂದುವರಿದರೆ ಚುನಾವಣೆಯಲ್ಲಿ ಮುಂದೆ ಮತಕೇಳಲು ಕಷ್ಟವಾದೀತು ಎಂದಿದ್ದಾರೆ.

collage jds

ರಾಜೀನಾಮೆ:
ನನ್ನ ರಾಜೀನಾಮೆ ನಿನ್ನೆ-ಮೊನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲ. ಸತತ 15 ತಿಂಗಳು ಅಳೆದು-ತೂಗಿ, ಪಕ್ಷದ/ಸರ್ಕಾರದ ಪರಿಮಿತಿಯಲ್ಲಿ ಎಲ್ಲಾ ಪ್ರಯತ್ನಗಳೂ ಮುಗಿದ ಮೇಲೆ 3 ತಿಂಗಳು ಮುಂಚಿತವಾಗಿಯೇ ಮುಖಂಡರಿಗೆ ತಿಳಿಸಿದ್ದೇನೆ. ಅನಿವಾರ್ಯವಾಗಿ ಸರ್ಕಾರದ ಧೋರಣೆಯಿಂದ ಬೇಸತ್ತಿದ್ದ ಹಲವು ಸಮಾನ ಮನಸ್ಕ ಶಾಸಕರೊಡನೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬಂದಿರುತ್ತೇನೆ. ಅಭಿವೃದ್ಧಿಯಿಲ್ಲದೆ ಇದ್ದರೂ 5 ವರ್ಷ ಸಿಕ್ಕ ಅಧಿಕಾರವನ್ನು ಅನುಭವಿಸಿ ಶಾಸಕನಾಗಿ ಮುಂದುವರಿಯುವುದು ಸುಲಭದ ಆಯ್ಕೆಯಾಗಿತ್ತು. ಆದರೆ ಕ್ಷೇತ್ರದ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು ಅದರ ಪರಿಣಾಮಗಳನ್ನು ಎದುರಿಸಿ, ಪಕ್ಷದ ನಾಯಕರ ಸಿಟ್ಟು, ಅಧಿಕಾರದ ಬಲಪ್ರಯೋಗಗಳನ್ನೂ ಎದುರಿಸಿ ಮತ್ತೆ ಜನರ ಬಳಿ ಹೋಗುವ ಗಟ್ಟಿಯಾದ ನಿರ್ಧಾರ ಮಾಡಿದ್ದೇನೆ. ಆದರೆ ಇನ್ನೂ ಪಕ್ಷದಲ್ಲಿಯೇ ಇದ್ದೇನೆ.

 

ಅತೀ ಶೀಘ್ರದಲ್ಲಿಯೇ ಕ್ಷೇತ್ರಾದ್ಯಂತ ಸಂಚರಿಸಿ ಎಲ್ಲ ಕಾರ್ಯಕರ್ತರಲ್ಲಿ ಈ ಎಲ್ಲ ವಿಷಯ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಆದರೂ ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ಕ್ಷೇತ್ರದಿಂದ 8-10 ದಿನ ಹೊರಗುಳಿಯಬೇಕಾದ ಅನಿವಾರ್ಯತೆ ಎಲ್ಲದಕ್ಕೂ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ.

ನಾನೂ ಎಲ್ಲೇ ಇರಲಿ ಎಲ್ಲ ವರ್ಗದ ಜನರು ಹಾಗೂ ನನ್ನ ಕಾರ್ಯಕರ್ತರನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಇನ್ನೂ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸಗಳು ಮುಂದುವರಿಯಲಿದೆ ಎಂಬ ಭರವಸೆಯೊಂದಿಗೆ ನಿಮ್ಮ ಸಹಕಾರವಿರಲಿ ಎಂದು ಶಿವರಾಂ ಹೆಬ್ಬಾರ್ ರಾಜೀನಾಮೆ ನೀಡಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

TAGGED:Coalition GovernmentDevelopmentfacebook postkarwarPublic TVResignationShivaram Hebbarಅಭಿವೃದ್ಧಿಕಾರವಾರಪಬ್ಲಿಕ್ ಟಿವಿಫೇಸ್‍ಬುಕ್ ಪೋಸ್ಟ್ರಾಜೀನಾಮೆಶಿವರಾಂ ಹೆಬ್ಬಾರ್ಸಮ್ಮಿಶ್ರ ಸರ್ಕಾರ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Darshan Pavithra Gowda 1
ಗಟ್ಟಿಯಾದ ಬ್ಲಾಂಕೆಟ್‌, ದಿಂಬು, ನೈಟ್ ಡ್ರೆಸ್ ಬೇಕು – ಜೈಲಲ್ಲಿರೋ ದರ್ಶನ್ ಹೊಸ ಬೇಡಿಕೆ
Bengaluru City Cinema Latest Top Stories
Sudeep 1
ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ
Cinema Latest Sandalwood
Vishnu memorial
ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ
Cinema Latest Sandalwood Top Stories
SUDEEP
ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!
Cinema Latest Sandalwood Top Stories
Mangalapuram‌ movie
ರಿಷಿ ಹೊಸ ಸಿನಿಮಾಗೆ ಮುಹೂರ್ತ: ಬಿಗ್ ಬಾಸ್ ಸ್ಪರ್ಧಿ ನಾಯಕಿ
Cinema Latest Sandalwood Top Stories

You Might Also Like

HMT Land 1
Court

ಎಪಿಸಿಸಿಎಫ್ ಆರ್. ಗೋಕುಲ್ ಅಮಾನತು ರದ್ದುಗೊಳಿಸಿದ CAT

Public TV
By Public TV
5 hours ago
big bulletin 30 August 2025 part 1
Big Bulletin

ಬಿಗ್‌ ಬುಲೆಟಿನ್‌ 30 August 2025 ಭಾಗ-1

Public TV
By Public TV
5 hours ago
big bulletin 30 August 2025 part 2
Big Bulletin

ಬಿಗ್‌ ಬುಲೆಟಿನ್‌ 30 August 2025 ಭಾಗ-2

Public TV
By Public TV
5 hours ago
big bulletin 30 August 2025 part 3
Big Bulletin

ಬಿಗ್‌ ಬುಲೆಟಿನ್‌ 30 August 2025 ಭಾಗ-3

Public TV
By Public TV
6 hours ago
Nagmohan Das Siddaramaiah
Bengaluru City

ಬಿಬಿಎಂಪಿ‌ ವ್ಯಾಪ್ತಿಯ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ಆರೋಪ: ತನಿಖಾ ವರದಿ ಪಡೆದ ಸಿಎಂ

Public TV
By Public TV
6 hours ago
Kodagu 1
Bagalkot

ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?