ಕಾರವಾರ: ರಾಜಕೀಯವಾಗಿ ಹತಾಶರಾಗಿರುವ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್ ಮತ್ತು ಪ್ರಧಾನಿ ಮೋದಿ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕುಟುಕಿದ್ದಾರೆ.
Advertisement
ಮನುವಿಕಾಸ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಕೆರೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ತಾವು ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ. ಅವರಿಬ್ಬರೂ ಪರಸ್ಪರ ಟೀಕಿಸುತ್ತ ಕಾಲ ಕಳೆಯುತ್ತಿದ್ದಾರೆ. ಪದೇ ಪದೇ ಸಂಘ ಪರಿವಾರದ ಮೇಲೆ ಹರಿಹಾಯುತ್ತಾರೆ. ಇದು ಅವರಿಬ್ಬರೂ ಗೊಂದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಗುಡುಗಿದರು. ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ: ತೇಲ್ಕೂರ್
Advertisement
Advertisement
ವಿಜಯ ದಶಮಿ ಮುಗಿಯಲಿ ಎಂದು ಕಾಯುತ್ತಿದ್ದೇವು. ಇಂದಿನಿಂದ ಎಲ್ಲಾ ಸಚಿವರು. ಹಾನಗಲ್ ಕ್ಷೇತ್ರದಲ್ಲಿ ಬೀಡು ಬಿಡಲಿದ್ದು, ಅ.28ರ ವರೆಗೆ ನಿರಂತರ ಪ್ರಚಾರ ನಡೆಸಲಿದ್ದೇವೆ ಎಂದರು. ಕೃಷಿಕರನ್ನು ಮತ್ತು ಸೈನಿಕರನ್ನು ನಾವು ಗೌರವಿಸದೇ ಇದ್ದರೆ ನಮಗೆ ಬದುಕಲು ಸಾಧ್ಯವೇ ಇಲ್ಲ. ರೈತರು ಕೃಷಿಯಿಂದ ವಿಮುಖವಾದರೆ ದೇಶ ಸಫಲತೆ ಕಾಣಲು ಸಾಧ್ಯವಿಲ್ಲ. ಆದ್ದರಿಂದ ರೈತರನ್ನು ಗೌರವಿಸುವ ಅವರಿಗೆ ಗೌರವ ಕೊಡುವ ಕಾರ್ಯವಾಗಬೇಕು. ಸರ್ಕಾರ ಸಾಕಷ್ಟು ನೀರಿನ ಯೋಜನೆಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು, ಮನುವಿಕಾಸದಂತ ಸಂಸ್ಥೆ ಕೆರೆ ಹೂಳೆತ್ತುವ ಮೂಲಕ ಪೂರಕ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್
Advertisement
ಕಾರ್ಯಕ್ರದಲ್ಲಿ ಮನು ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಗಣಪತಿ ಭಟ್, ಡಿವೈಎಸ್‍ಪಿ ರವಿ ನಾಯ್ಕ್, ಜಿಲ್ಲೆಯ ಹಾಗೂ ಹಾವೇರಿ ಜಿಲ್ಲೆಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.