ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

Advertisements

ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಖಾಸಗಿ ಕಾರ್ಯಕ್ರಮವೊಂದಕ್ಕೆ ಶಿರಸಿಗೆ ಬಂದಿದ್ದು, ಈ ವೇಳೆ ಪತ್ನಿ ಗೀತಾ ಅವರೊಂದಿಗೆ ಶಿವಣ್ಣ ಶಿರಸಿಯ ಸಹಸ್ರಲಿಂಗ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

Advertisements

ಅಪ್ಪು ಅಗಲಿಕೆಯಿಂದ ಹೊರಬರಲು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ, ಕಿರುತೆರೆಯ ರಿಯಾಲಿಟಿ ಶೋನತ್ತ ಮುಖ ಮಾಡಿದ್ದಾರೆ. ಇಷ್ಟೇಲ್ಲ ಬ್ಯುಸಿಯಿರುವ ಶಿವಣ್ಣ ಕೊಂಚ ಬಿಡುವು ಮಾಡಿಕೊಂಡು ಕಾರ್ಯಕ್ರಮವೊಂದಕ್ಕಾಗಿ ಶಿರಸಿಗೆ ಆಗಮಿಸಿದ್ದಾರೆ. ಹಾಗೆಯೇ ಶಿರಸಿಯ ಬಳಿ ಇರುವ ಸಹಸ್ರಲಿಂಗ ಸನ್ನಿಧಾನಕ್ಕೆ ಶಿವರಾಜ್‌ಕುಮಾರ್ ದಂಪತಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

Advertisements

ಪತ್ನಿ ಗೀತಾ ಅವರ ಜತೆ ಶಿವರಾಜ್‌ಕುಮಾರ್ ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸದ್ಯ ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisements
Advertisements
Exit mobile version