ಉಪೇಂದ್ರ (Upendra) ನಟಸಿ, ನಿರ್ದೇಶನ ಮಾಡಿರುವ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಖ್ಯಾತ ನಿರ್ದೇಶಕ ಮಣಿರತ್ನಂರನ್ನು ಕೂಡ ಉಪೇಂದ್ರ ಎಂದು ಶಿವಣ್ಣ (Shivarajkumar0 ಕೊಂಡಾಡಿದ್ದಾರೆ.
Advertisement
ಉಪೇಂದ್ರ ಅವರು ಎಂದಿಗೂ ನನ್ನ ಫಸ್ಟ್ ಡಾರ್ಲಿಂಗ್. ಕೆಲವು ವರ್ಷಗಳ ‘ಶ್’ ನೋಡಲು ಪಲ್ಲವಿ ಥಿಯೇಟರ್‌ಗೆ ಹೋಗಿದ್ದೆ. ಆಮೇಲೆ ಓಂ ಶುರುವಾಯಿತು. ಅರ್ಧ ಶೂಟಿಂಗ್ ಆದಾಗ್ಲೇ ಹೇಳಿದ್ದೆ, ಮಣಿರತ್ನಂ ಅವರನ್ನು ಉಪೇಂದ್ರ ಮೀರಿಸುತ್ತಾರೆ ಎಂದಿದ್ದೆ. ಓಂ ಸಿನಿಮಾದಲ್ಲಿ ಉಪ್ಪಿ ರಿಯಾಲಿಟಿ ತಂದರು. ಅವರಿಗೆ ಬದುಕಿನ ಮಹತ್ವ ಗೊತ್ತು ಎಂದು ಕೊಂಡಾಡಿದ್ದಾರೆ ಶಿವಣ್ಣ.
Advertisement
Advertisement
ಪತ್ನಿ ಗೀತಾ ಬಿಟ್ಟರೆ ಉಪ್ಪಿ ನೀವೇನೆ ಅಂತಿದ್ದೆ, ಉಪೇಂದ್ರ ಮೇಲೆ ಅಷ್ಟೊಂದು ಪ್ರೀತಿ. ಇವರೊಂದಿಗೆ ಪ್ರೀತ್ಸೆ, ಲವ್‌ಕುಶ್, ಈಗ 45 ಕೂಡ ಮಾಡ್ತಿದ್ದೀವಿ. ಉಪ್ಪಿ ಏನೇ ಮಾಡಿದ್ರೂ ನನಗೆ ಇಷ್ಟ ಆಗುತ್ತದೆ. ಅಪ್ಪು ಸಿನಿಮಾನೂ ನನಗೆ ಹಾಗೆ ಅನಿಸ್ತಿತ್ತು. ಹಾಗೆ ಉಪ್ಪಿ ಏನೇ ಮಾಡಿದ್ರೂ ಇಷ್ಟ ಆಗುತ್ತದೆ. ಇನ್ನೂ ಹಳೇ ಕಾಲದ ಸಿನಿಮಾ ಸ್ಟೈಲ್ ಮತ್ತೆ ಬರಬೇಕು. ಯಾಕೆ ಹಿಟ್ ಆಗಲ್ಲ ಖಂಡಿತ ಆಗುತ್ತದೆ ಎಂದರು. ಇದೇ ವೇಳೆ, ಮತ್ತೆ ಸೇರೋಣ ‘ಓಂ 2’ ಮಾಡೋಣ ಎಂದು ವೇದಿಕೆ ಮೇಲೆ ಉಪೇಂದ್ರಗೆ ನಟ ಹೇಳಿದರು. ಕೆಜಿಎಫ್, ಕಾಂತಾರ ಥರ ಗೋಲ್ ರೀಚ್ ಆಗಲಿ ಎಂದು ಚಿತ್ರತಂಡಕ್ಕೆ ಶಿವಣ್ಣ ವಿಶ್ ಮಾಡಿದರು, ಈ ವೇಳೆ, ವಿದೇಶದಲ್ಲಿ ಡಿ.24ಕ್ಕೆ ನನಗೆ ಸರ್ಜರಿ, 25ಕ್ಕೆ ಅಲ್ಲೇ ಸಿನಿಮಾ ನೋಡಿ ಕಾಲ್ ಮಾಡ್ತೀನಿ ಎಂದು ಹೇಳಿದರು.
Advertisement
ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.