ಡಾ.ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ ಹಿನ್ನೆಲೆ ಇಂದು (ಏ.12) ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಅಭಿಮಾನಿಗಳು, ಕುಟುಂಬಸ್ಥರು ಭೇಟಿ ನೀಡಿದ್ದಾರೆ. ರಾಘಣ್ಣ, ಶಿವಣ್ಣ, ಅಶ್ವಿನಿ ಪುನೀತ್‌ರಾಜ್‌ಕುಮಾರ್ ಆಗಮಿಸಿ ಅಪ್ಪಾಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಅಣ್ಣಾವ್ರರನ್ನು ನೆನೆದು ಶಿವಣ್ಣ (Shivarajkumar) ಭಾವುಕರಾಗಿದ್ದಾರೆ. ಇದನ್ನೂ ಓದಿ:ಇಸ್ರೇಲ್‌ನಿಂದ ರಕ್ಷಿಸಿದ್ದಕ್ಕೆ ಪಿಎಂಗೆ ಥ್ಯಾಂಕ್ಯೂ ಎಂದ ನಟಿ ನುಶ್ರತ್ ಭರೂಚಾ
ಅಣ್ಣಾವ್ರ (Rajkumar) ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಶಿವಣ್ಣ ಮಾತನಾಡಿ, ಒಂದು ಬಾರಿ ಹಚ್ಚೆ ಹಾಕಿಸಿಕೊಂಡ್ರೆ ಹೇಗೆ ಹೋಗೋದಿಲ್ಲೋ ಹಾಗೇ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಹೋಗಲ್ಲ. ಅಪ್ಪಾಜಿ ಮಾಡಿರೋ ಕಲಾ ಸೇವೆಯಿಂದ ಇವತ್ತಿಗೂ ಅಭಿಮಾನ ಹಾಗೆ ಉಳಿಸಿಕೊಂಡಿದೆ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ
- Advertisement
- Advertisement
ರಾಜಕೀಯವಾಗಿ ಯೋಚಿಸದೇ ಗೋಕಾಕ್ ಚಳುವಳಿಯಲ್ಲಿ ಅಪ್ಪಾಜಿ ಭಾಗವಹಿಸಿದ್ದರು. ಸದಾ ನೆಲ, ಜಲ, ಭಾಷೆ ಅಂತಾ ಬಂದಾಗ ಅವರು ಮುಂದೆ ಇರೋರು. ಅದಕ್ಕೂ ದೇವರ ಕೃಪೆ ಬೇಕು. ಇಂತಹ ತಂದೆಗೆ ನಾವು ಮಕ್ಕಳಾಗಿರೋದು ಹೆಮ್ಮೆ ಅನಿಸುತ್ತದೆ. ಈ ಚಿಕ್ಕ ಮಕ್ಕಳನ್ನ ಕೇಳಿದ್ರು ರಾಜ್‌ಕುಮಾರ್ ಯಾರು ಅಂತಾ ಹೇಳುತ್ತಾರೆ. ಅಪ್ಪಾಜಿ ಪಾಠದ ಹಾಗೆ ಅಭಿಮಾನ ಜಾಸ್ತಿ ಆಗುತ್ತೆ ಹೊರತು ಎಂದಿಗೂ ಕಮ್ಮಿಯಾಗಲ್ಲ. ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿದೆ ಅಂದರೆ ಅಪ್ಪಾಜಿ ಸಿನಿಮಾಗಳೇ ಕಾರಣ ಎಂದಿದ್ದಾರೆ.
ಈ ವೇಳೆ, ಆರೋಗ್ಯ ಈಗ ಚೆನ್ನಾಗಿದೆ. ಡ್ಯಾನ್ಸ್ ಶುರು ಮಾಡಿದ್ದೀನಿ. ಐದಾರು ತಿಂಗಳು ವಿಶ್ರಾಂತಿ ಪಡೆದಿದ್ದೇನೆ. ಆದರೆ ನಾನು ಬೇಗನೇ ರಿಕವರಿ ಆಗಿದ್ದೇನೆ. ರಾಮ್ ಚರಣ್ ನಟನೆಯ ಸಿನಿಮಾದ ಶೂಟಿಂಗ್‌ನಲ್ಲಿ ಎರಡು ದಿನ ಭಾಗವಹಿಸಿ ಬಂದಿದ್ದೇನೆ. ನನ್ನ 131ನೇ ಸಿನಿಮಾ ಪವನ್ ಒಡೆಯರ್ ಜೊತೆ ಶುರು ಮಾಡಬೇಕು ಎಂದು ಆರೋಗ್ಯ ಹಾಗೂ ಸಿನಿಮಾ ಬಗ್ಗೆ ಶಿವಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.