ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನರಾಗಿ 3 ವರ್ಷಗಳಾಗಿವೆ. ಅಪ್ಪು 3ನೇ ಪುಣ್ಯಸ್ಮರಣೆಯಂದು (ಅ.29) ಸ್ಮಾರಕಕ್ಕೆ ಶಿವಣ್ಣ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಶಿವಣ್ಣ ಮಾತನಾಡಿ, ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ ಎಂದು ಶಿವಣ್ಣ (Shivarajkumar) ಮಾತನಾಡಿದ್ದಾರೆ.
- Advertisement -
ಅಪ್ಪುನ ಅಷ್ಟು ಬೇಗ ಮರೆಯೋಕೆ ಆಗಲ್ಲ. ಶೂಟಿಂಗ್ ಹೋದರೂ ಎಲ್ಲೇ ಇದ್ದರೂ ಪುನೀತ್ ನೆನಪಾಗುತ್ತಲೇ ಇರುತ್ತಾನೆ. ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ. ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ. ನಾನು ಈ ಜಾಗಕ್ಕೆ ಬರಬೇಕು ಅಂತ ಏನೂ ಇಲ್ಲ. ಈ ಜಾಗದಲ್ಲಿ ಒಂದು ಪಾಸಿಟಿವ್ ವೈಬ್ ಇದೆ ಎಂದಿದ್ದಾರೆ. ಇದನ್ನೂ ಓದಿ:ಅಪ್ಪು ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಶ್ರೀದೇವಿ ಭೈರಪ್ಪ
- Advertisement -
- Advertisement -
ಅಪ್ಪುನ ಕಳೆದುಕೊಂಡ ನೋವು ಇದ್ದೆ ಇದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವನನ್ನು ನೆನಪಿಸಿಕೊಳ್ಳುತ್ತೇವೆ. ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರಲ್ಲಿ ಅಪ್ಪುನ ನೋಡ್ತೀನಿ ಎಂದಿದ್ದಾರೆ. ಅಭಿಮಾನಿಗಳು ತೋರಿಸುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದು ಶಿವಣ್ಣ ಎಂದಿದ್ದಾರೆ.
- Advertisement -
ಅಂದಹಾಗೆ, ನಟ ಪುನೀತ್‌ರಾಜ್‌ಕುಮಾರ್ ಅವರು 2021ರ ಅ.29ರಂದು ನಿಧನರಾದರು.