ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ (World Cup 2023) ಟೂರ್ನಿ ಶಿವಣ್ಣ ವೀಕ್ಷಿಸಿದ್ದಾರೆ. ಶಿವಣ್ಣ ಕ್ರಿಕೆಟ್ ವೀಕ್ಷಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರಬಂದಿದ್ದೇಕೆ? ರಮ್ಯಾ ಸ್ಪಷ್ಟನೆ
Advertisement
ಏಕದಿನ ವಿಶ್ವಕಪ್ ಪಂದ್ಯ ಟೂರ್ನಿ ಭಾರತ- ನೆದರ್ಲೆಂಡ್ಸ್ (India Vs Netherlands) ತಂಡಗಳ ನಡುವಿನ ಪಂದ್ಯವನ್ನ ಕ್ರಿಕೆಟ್ ಶಿವರಾಜ್‌ಕುಮಾರ್ ವೀಕ್ಷಿಸಿದ್ದಾರೆ. ಬಳಿಕ ಮಾಧ್ಯಮವೊಂದಕ್ಕೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Advertisement
ಬಳಿಕ ಹಂಬಲ್ ಗುಣ ಬಂದಿರೋದೆಲ್ಲ ನಮ್ಮ ತಂದೆ ಅವರಿಂದಲೇ. ಅವರು ಒಳ್ಳೆಯ ದಾರಿ ಹಾಕಿಕೊಟ್ಟಿದ್ದಾರೆ. ಇವತ್ತು ಪುನೀತ್‌ನ ಯಾಕೆ ಎಲ್ಲರೂ ನೆನಪು ಮಾಡಿಕೊಳ್ತಾರೆ ಅಂದರೆ ಅವರ ಒಳ್ಳೆತನದಿಂದ, ಅದೇ ಶಾಶ್ವತವಾಗಿರುವುದು ಎಂದಿದ್ದಾರೆ. ನಮ್ಮ ವೃತ್ತಿಯಲ್ಲಿ ಎಷ್ಟೇ ಬೆಳೆದಿದ್ರೂ, ನಮ್ಮ ಭಾರತಕ್ಕೆ ಆಡುವ ಆಟಗಾರರ ಜೊತೆ ಇಲ್ಲಿ ಕೂರೋದು ಖುಷಿ ಕೊಟ್ಟಿದೆ ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.