ಜೇಮ್ಸ್ ಸಿನಿಮಾ ನೋಡಿದ ಪ್ರತಿಯೊಬ್ಬರೂ ಕಣ್ಣೀರು ಹಾಕ್ತಾರೆ: ಶಿವರಾಜ್ ಕುಮಾರ್

Public TV
2 Min Read
shivaraj kumar

– ಫಿಲ್ಮಸಿಟಿಗೆ ಹೆಸರಿಡುವುದು ದೊಡ್ಡ ವಿಷಯವಲ್ಲ
– ಅಪ್ಪು ಅಗಲಿಕೆ ನೋವಿದೆ

ಮೈಸೂರು: ಅಪ್ಪು ನಟನೆ ಬಿಟ್ಟು ಮಾನವೀಯತೆಯಲ್ಲಿ ತುಂಬಾ ಎತ್ತರಕ್ಕೆ ಇದ್ದಾರೆ. ಇದರಿಂದಾಗಿ ಎಲ್ಲಾ ವರ್ಗದ ಜನರು ಸಿನಿಮಾ ನೋಡಲು ಬರುತ್ತಿದ್ದಾರೆ ಎಂದು ನಟ ಶಿವರಾಜ್‍ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ವ್ಯಕ್ತಿತ್ವವನ್ನು ಮೀರಿ ಬದುಕಿದ್ದಾರೆ. ಜೇಮ್ಸ್ ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ಣೀರು ಹಾಕಿ ಹೊರಬರುತ್ತಾರೆ. ಸಿನಿಮಾದಲ್ಲಿ ಸಂತೋಷದ ಜೊತೆ ಎಮೋಷನಲ್ ಸೆಂಟಿಮೆಂಟ್ ಇದೆ. ಸಿನೆಮಾ ನೋಡಲು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಬಂದಿದ್ದಾರೆ. ಎಲ್ಲರಿಗೂ ಒಂದು ನಮ್ಮ ಉದ್ಯೋಗವನ್ನು ಬಿಟ್ಟು ಬೇರೆಯಾದ್ದೇ ಒಂದು ಸಂಪರ್ಕ ಇದೆ ಎಂದು ತಿಳಿಸಿದರು.

ಅಪ್ಪು ನಮಗೆ ಸ್ವಂತ ಅಲ್ಲ ಈಗ ಜನರಿಗೆ ಸ್ವಂತ ಆಗ್ಬಿಟ್ಟಿದ್ದಾನೆ. ಅಪ್ಪು ಚಿಕ್ಕವಯಸ್ಸಿನಿಂದ ಜನರ ಜೊತೆ ಬೆರೆತಿದ್ದಾನೆ. ಅವರ ಸಿನಿಮಾ ನೋಡಲು ಕುಟುಂಬದ ಜೊತೆ ಬರುತ್ತಾರೆ ಎನ್ನವುದನ್ನು ಆಶ್ಚರ್ಯ ಪಡುವ ಅಗತ್ಯವಿಲ್ಲ. ಮಾನವೀಯತೆಯ ಮೇಲೆ ಇರುವ ಪ್ರೀತಿಯಿಂದಾಗಿ ಸಿನಿಮಾ ನೋಡದವರೂ ನೋಡುತ್ತಿದ್ದಾರೆ ಎಂದರು.

puneeth rajkumar

ಇದೇ ವೇಳೆ ಡಬ್ ಮಾಡುವಾಗ ಕಷ್ಟವಾಯಿತು. ಬಹಳ ನೋವಾಗಿತ್ತು ಎಂದ ಅವರು, ಸಿನಿಮಾವನ್ನು ಇನ್ನೂ ನೋಡಿಲ್ಲ. ಈಗ ಥಿಯೆಟ್‍ರ್‍ಗಷ್ಟೇ ಭೇಟಿ ನೀಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:  ಎಂದಿಗೂ ಕಸಿದುಕೊಳ್ಳಲಾಗದ ಎನರ್ಜಿ: ಅಪ್ಪುಗೆ ಯಶ್ ವಿಶ್

ಅಪ್ಪುಗೆ ಕೊನೆ ಅಂತ ಮಾತನಾಡುವುದು ಬೇಡ. ಅವನಿಲ್ಲದೇ ಹುಟ್ಟುಹಬ್ಬ ಆಚರಿಸುತ್ತಿರುವುದು ನೋವಿದೆ. ಆದರೂ ನೋವಿನ ಜೊತೆಯೇ ಬದುಕುತ್ತೇವೆ. ಎಲ್ಲೂ ಇಲ್ಲ ಎಂದು ಅಂದುಕೊಳ್ಳದೇ ನಮ್ಮ ಮನಸಲ್ಲೇ ಜೀವಂತವಾಗಿಡಬೇಕು ಎಂದು ಮನವಿ ಮಾಡಿದರು.

FotoJet 6 7

ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಫಿಲ್ಮಸಿಟಿಗೆ ಪುನೀತ್ ಹೆಸರಿಡಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಪುನೀತ್ ಹೆಸರು ಎಲ್ಲರ ಆತ್ಮದಲ್ಲೂ ಇದೆ. ಕೆಲವರೂ ಟ್ಯಾಟೂಗಳನ್ನು ಹಾಕೊಂಡಿದ್ದಾರೆ. ಫಿಲ್ಮಸಿಟಿ ನಿರ್ಮಾಣವಾಗುತ್ತಿರುವುದಕ್ಕೆ ಹೆಸರಿಡುವುದು ದೊಡ್ಡ ವಿಷಯ ಇಲ್ಲ. ಪುನೀತ್ ಹೆಸರು ಇಡಲೇ ಬೇಕೆಂದಿಲ್ಲ. ಇಟ್ಟರೇ ಸಂತೋಷ. ಬೇರೆಯವರ ಹೆಸರನ್ನು ಇಟ್ಟರು ಸಂತೋಷ. ಈ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

shivarajkumar 3

ಅಪ್ಪು ಅವರ ಕನಸು ಸ್ಕೂಲ್ ಕಟ್ಟಬೇಕು ಎನ್ನುವುದು. ಇದು ಎಲ್ಲರ ಕನಸಾಗಿತ್ತು. ಅಂತೆಯೇ ಕಲಸ ನಡೆಯುತ್ತಿದೆ. ಸಾಕಷ್ಟು ದಾನಿಗಳು ಸಹಾಯ ಮಾಡಿ ದ್ದಾರೆ ಎಂದ ಅವರು ಇಬ್ಬರಿಗೂ ಉಡುಗೊರೆ ಎಂದರೆ ಇಷ್ಟ. ಅಪ್ಪುಗೆ ಬ್ರ್ಯಾಂಡ್ ಎಂದರೆ ತುಂಬಾ ಇಷ್ಟವಾಗಿತ್ತು ಎಂದು ನೆನಪಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *