ಬೆಂಗಳೂರು: ನಿರ್ಮಾಪಕರು ʼಜೇಮ್ಸ್ʼ ಸಿನಿಮಾ ಕಾಪಾಡಿಕೊಳ್ಳಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
Advertisement
ನಗರದಲ್ಲಿ ಇಂದು ನಡೆದ ಜೇಮ್ಸ್ ಸುದ್ದಿಗೋಷ್ಠಿಯಲ್ಲಿ ಥಿಯೇಟರ್ ಸಮಸ್ಯೆ ಕುರಿತು ಮಾತನಾಡಿದ ಅವರು, ಸಿಎಂ ನಮಗೆ 3 ಸಲ ಫೋನ್ ಮಾಡಿದ್ದರು. ನಿರ್ಮಾಪಕರು ಜೇಮ್ಸ್ ಕಾಪಾಡಿಕೊಳ್ಳಬೇಕು. ಫ್ಯಾನ್ಸ್ ನಮ್ಮ ಜೊತೆಗಿದ್ದಾರೆ. ಮಾಧ್ಯಮಗಳು ಭಾವುಕ ರೀತಿಯಲ್ಲಿ ಜೇಮ್ಸ್ ಬಗ್ಗೆ ವರದಿ ಮಾಡಿವೆ. ಥಿಯೇಟರ್ ಸಮಸ್ಯೆ ಯಾವಾಗಲೂ ಇದ್ದೇ ಇರುತ್ತದೆ. ಇಡೀ ಚಿತ್ರರಂಗಕ್ಕೆ ಅಪ್ಪು ಮೇಲೆ ಪ್ರೀತಿಯಿದೆ. ಎಲ್ಲವೂ ಬೇಗ ಸರಿ ಹೋಗಲಿ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್
Advertisement
ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಆಗಿದ್ದೇ ಖುಷಿ. ಜೇಮ್ಸ್ ಚಿತ್ರತಂಡ ತುಂಬಾ ಗಟ್ಟಿಯಾಗಿತ್ತು. ಅಪ್ಪು ಮಾಡೋ ಪಾತ್ರ ಯಾರು ಮಾಡೋಕೆ ಆಗಲ್ಲ. ಅಪ್ಪುಗೆ ಹೇಗೆ ಧ್ವನಿ ಕೊಟ್ಟೆ ಅನ್ನೋದೇ ಗೊತ್ತಿಲ್ಲ. ಅಭಿಮಾನಿ ದೇವರುಗಳು ನಮ್ಮ ಜೊತೆ ಇದ್ದಾರೆ. ಅಪ್ಪು ಬಗ್ಗೆ ಎಲ್ಲರೂ ಮನಸ್ಸಿನಿಂದ ಮಾತಾಡುತ್ತಾರೆ ಎಂದು ಕೃತಜ್ಞತೆ ಸಲ್ಲಿಸಿದರು.
Advertisement
Advertisement
ನೋವಲ್ಲಿ, ನಗುವಲ್ಲಿ ಅಪ್ಪು ಜೀವಂತವಾಗಿದ್ದಾನೆ. ಅಪ್ಪುನ ಇನ್ಮುಂದೆ ಸೆಲೆಬ್ರೇಟ್ ಮಾಡೋಣ. ಅಪ್ಪು ಬಗ್ಗೆ ಎಲ್ಲರೂ ಮಾತಾಡಿದ್ದಾರೆ. ಪ್ರತಿಸಲವೂ ನನಗೆ ಅಪ್ಪು ಬಗ್ಗೆ ಮಾತಾಡೋದು ಕಷ್ಟ. ಪುನೀತ್ ಹಳೇ ನೆನಪುಗಳೇ ಬರುತ್ತವೆ. ಅಪ್ಪು ನನಗಿಂತ ಚಿಕ್ಕವನಾದರೂ ನನಗೆ ಫ್ರೆಂಡ್. ಅವನು ಅಪ್ಪಿಕೊಳ್ಳುವ ಸ್ಟೈಲ್ ನಿಮಗೆ ಗೊತ್ತೇ ಇದೆ ಎಂದು ನೆನಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?