Bengaluru CityCinemaKarnatakaLatestMain PostSandalwood

ಶಿವಣ್ಣ ಅಭಿಮಾನಿಗಳಿಗೆ ಗುಡ್‌ ನ್ಯೂಸ್: `ವೇದ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

`ಭಜರಂಗಿ 2′(Bhajarangi 2) ಚಿತ್ರದ ನಂತರ ಮತ್ತೆ ಎ.ಹರ್ಷ ಮತ್ತು ಶಿವರಾಜ್‌ಕುಮಾರ್ (Shivarajkumar)  ಕಾಂಬಿನೇಷನ್‌ನಲ್ಲಿ `ವೇದ’ (Vedha) ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಮೂಲಕ  ತಮ್ಮ ಅಭಿಮಾನಿಗಳಿಗೆ ಶಿವಣ್ಣ ಮತ್ತು ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ವೇದ’ ಸಿನಿಮಾದ ಡೇಟ್ ರಿವೀಲ್ ಮಾಡಿದ್ದಾರೆ.

ಎ.ಹರ್ಷ (A. Harsha) ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ `ವಜ್ರಕಾಯ’, `ಭಜರಂಗಿ’, `ಭಜರಂಗಿ 2′, ಸಿನಿಮಾಗಳು ಚಿತ್ರಮಂದಿರದಲ್ಲಿ ಕಮಾಲ್ ಮಾಡಿತ್ತು. ಇದೀಗ `ವೇದ’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಲು ಮುಂದಾಗಿದ್ದಾರೆ. ಕ್ರಿಸ್ಮಸ್ ಹಬ್ಬದ ವೇಳೆ ಶಿವಣ್ಣ ವೇದವತಾರದಲ್ಲಿ ಬರಲು ಸಜ್ಜಾಗಿದ್ದಾರೆ. ಡಿಸೆಂಬರ್ 23ಕ್ಕೆ ಸಿಲ್ವರ್ ಸ್ಕ್ರೀನ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ: ಫೋಟೋ ವೈರಲ್

 

View this post on Instagram

 

A post shared by A Harsha (@nimmaaharsha)

ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಗಾನವಿ ನಟಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ, ಉಮಾಶ್ರೀ, ಜಗಪ್ಪ, ರಘು ಶಿವಮೊಗ್ಗ, ವೀಣಾ ಪೊನ್ನಪ್ಪ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು 1960ರ ನೈಜ ಕಥೆಯನ್ನ ಹೇಳಲು  ಭಿನ್ನ ಅವತಾರದ ಮೂಲಕ ರಂಜಿಸಲು ಬರುತ್ತಿರುವ ಶಿವಣ್ಣನ ಹೊಸ ಅವತಾರ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button