ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಪ್ರಚಾರಕ್ಕೆ ಹೋಗಲ್ಲ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು. ನಾನು ಅಷ್ಟು ಬುದ್ಧಿವಂತ ಅಲ್ಲ, ಸ್ವಲ್ಪ ಬುದ್ಧಿ ಬಂದಿದೆ ಎಂದು ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪ್ರಚಾರ ನಡೆಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ನಾನು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತಿಲ್ಲ. ಅವರು ನನ್ನ ಬೆಂಬಲ ಕೋರಿಲ್ಲ. ಅಲ್ಲದೇ ಸದ್ಯ ಅವರು ಕರೆದರೂ ಹೋಗಲ್ಲ. ದೇವರು ಬಡವ ನೀನು ಮಡಗಿದ ಹಾಗೆ ಇರು ಎಂದು ಹೇಳಿದ್ದಾನೆ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು. ನಾನು ಅಷ್ಟು ಬುದ್ಧಿವಂತ ಅಲ್ಲ, ಸ್ವಲ್ಪ ಬುದ್ಧಿ ಬಂದಿದೆ. ಅದನ್ನು ಕಾಪಾಡಿಕೊಳ್ಳುತ್ತೇನೆ ಎಂದರು.
Advertisement
Advertisement
ಮಂಡ್ಯ ಮಾತ್ರವಲ್ಲ ಶಿವಮೊಗ್ಗಕ್ಕೂ ಪ್ರಚಾರಕ್ಕೆ ಹೋಗುವುದಿಲ್ಲ. ಈ ಹಿಂದೆ ನನ್ನ ಪತ್ನಿ ಸ್ಪರ್ಧೆ ಮಾಡಿದ್ದ ಕಾರಣ ಪ್ರಚಾರಕ್ಕೆ ಹೋಗಿದ್ದೆ. ಈಗ ಗೀತಾ ಅವರು ಮಾತ್ರ ಸಹೋದರನ ಪರವಾಗಿ ಪ್ರಚಾರಕ್ಕೆ ಹೋಗಬಹುದು ಅಷ್ಟೇ. ನಾನು ಬರಬೇಕು ಅಂತ ಅವರು ಕೂಡ ಬಯಸುವುದಿಲ್ಲ ಎಂದರು.
Advertisement
ಕಾವೇರಿ ಗಲಾಟೆಯಲ್ಲೂ ಜನರು ಸಿನಿಮಾ ನಟರು ಬರಲಿಲ್ಲ ಎಂದು ಕೇಳುತ್ತಾರೆ. ಆದರೆ ಅಲ್ಲಿ ಬಂದು ಏನು ಮಾಡೋಣ ಹೇಳಿ. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು. ನಮ್ಮನ್ನೂ ಕರೆಯಿರಿ, ಬಂದು ಅವರ ಮನೆ ಮುಂದೆ ಕೂರೋಣ. ಆದರೆ ಅಲ್ಲಿಗೆ ಬಂದರೆ ಜನ ಸೆಲ್ಫಿಗೆ ಮುಗಿ ಬೀಳುತ್ತಾರೆ. ಸೆಲ್ಫಿ ಕೊಡದಿದ್ದರೆ ನೋಡು ಒಂದು ಫೋಟೋ ಕೊಡಲ್ಲ ಎನ್ನುತ್ತಾರೆ. ಕೆಲವು ಬಾರಿ ಎಷ್ಟು ಬೈದರೂ, ಕೋಪ ಮಾಡಿಕೊಂಡರೂ ಅದು ನಿಲ್ಲಲ್ಲ. ಬೈದರು ಪರವಾಗಿಲ್ಲ ಸರ್. ಸೆಲ್ಫಿ ಬೇಕು ಎನ್ನುತ್ತಾರೆ ಎಂದರು.