ಡಾಲಿ, ರಮ್ಯಾ (Ramya) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಉತ್ತರಕಾಂಡ’ಗೆ (Uttarakanda Film) ಶೂಟಿಂಗ್‌ಗೆ ಶಿವಣ್ಣನ ಎಂಟ್ರಿಯಾಗಿದೆ. ರಮ್ಯಾ ಕಮ್‌ಬ್ಯಾಕ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ’ ಸ್ಟುಡಿಯೋ ಮಾಹಿತಿ ನೀಡಿದೆ.
‘ಉತ್ತರಕಾಂಡ’ (Uttarakanda) ಸಾಕಷ್ಟು ವಿಚಾರಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾ ಕಮ್ ಬ್ಯಾಕ್ ಚಿತ್ರ ಎಂಬ ನಿರೀಕ್ಷೆಯ ಜೊತೆ ಹಿಟ್ ಜೋಡಿ ಡಾಲಿ- ಶಿವಣ್ಣ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದು ಮತ್ತೊಂದು ಖುಷಿ. ಸದ್ಯ ಶೂಟಿಂಗ್‌ಗೆ ಹಾಜರಿ ಹಾಕಿರುವ ಶಿವಣ್ಣಗೆ ಚಿತ್ರತಂಡ ಸ್ವಾಗತ ಕೋರಿದೆ.
ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ! ????@NimmaShivanna sir on board.#Uttarakaanda@KRG_Studios @Dhananjayaka @divyaspandana #RohitPadaki @Karthik1423 @yogigraj @Uttarakaanda @KRG_Connects pic.twitter.com/IiLBOBrksk
— KRG Studios (@KRG_Studios) November 19, 2023
‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೈಲರ್, ಘೋಸ್ಟ್ ಚಿತ್ರದ ಸಕ್ಸಸ್ ನಂತರ ‘ಉತ್ತರಕಾಂಡ’ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿರೋ ಶಿವರಾಜ್‌ಕುಮಾರ್‌ಗೆ ಈ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಡಾಲಿ, ಸತ್ಯದೇವ್ ನಟನೆಯ ‘ಝೀಬ್ರಾ’ ಸಿನಿಮಾ
‘ಜೈಲರ್’ (Jailer) ಸಕ್ಸಸ್ ಬಳಿಕ ಶಿವಣ್ಣಗೆ ತಮಿಳಿನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಶಿವಣ್ಣಗೆ ಯಾವುದೇ ಪಾತ್ರ ನೀಡಿದರೂ ತೂಕವಾಗಿ ನಟಿಸುತ್ತಾರೆ. ಹಾಗಾಗಿ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣಗೆ ತೂಕವಾಗಿರೋ ಪಾತ್ರವೇ ಇದೆ.
ಇದೀಗ ‘ಉತ್ತರಕಾಂಡ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಮೂವರು ಈ ಚಿತ್ರದಲ್ಲಿ ಇರುವ ಕಾರಣ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.