ದಾವಣಗೆರೆ: ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 56 ನೇ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದ್ರು.
ನಗರದ ಜಯದೇವ ಸರ್ಕಲ್ ಬಳಿ ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಚರಣೆ ಮಾಡಿದ್ದು, ಕೇಕ್ ಕಟ್ ಮಾಡಿ ಪಟಕಿ ಸಿಡಿಸಿ ಸಂಭ್ರಮಿಸಿದ್ರು. ಶಿವರಾಜ್ ಕುಮಾರ್ ಆರೋಗ್ಯವಾಗಿ ಇರಲಿ ಎಂದು ಹಾರೈಸಿದ್ರು. ಅಲ್ಲದೆ ನಾಲ್ಕು ಸಾವಿರ ಬಾದುಷಾವನ್ನು ತಂದು ಹಂಚಿದ್ರು. ಇನ್ನು ಕಾರ್ಯಕ್ರಮದಲ್ಲಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿಗಳು ಭಾಗವಹಿಸಿ ಅಭಿಮಾನಿಗಳಿಗೆ ಸಿಹಿ ಹಂಚಿದ್ರು.
ನಟ ಶಿವರಾಜ್ ಕುಮಾರ್ ಗುರುವಾರ ತಮ್ಮ 56 ನೇ ಹುಟ್ಟು ಹಬ್ಬವನ್ನು ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು. ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ನಿವಾಸಕ್ಕೆ ಆಗಮಿಸಿದ್ದರು.