ಮಡಿಕೇರಿ: ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಟ್ವಿಟರ್ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ ಸೂಚಿಸಿದೆ. ವಿಡಿಯೋ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
#WeNeedEmergencyHospitalInKodagu ಟ್ವಿಟರ್ ಅಭಿಯಾನ ಶುರುವಾಗಿದೆ. ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನವನ್ನು ಕೊಡಗಿನ ಜನತೆ ಆರಂಭಿಸಿದೆ. ಕೊಡಗಿನಲ್ಲಿ ಐಶಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇದೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಸರ್ಕಾರದ ಗಮನ ಸೆಳೆಯಲು ಕೊಡಗಿನ ಮಂದಿ ನಿರ್ಧರಿಸಿದ್ದಾರೆ.
Advertisement
#WeNeedEmergencyHospitalInKodagu @narendramodi @mepratap #PMModi @AmitShah yes we need emergency hospital in kodagu. pic.twitter.com/BlS2BHhJ8z
— kavan devaiah (@DevaiahKavan) June 12, 2019
Advertisement
ಸದ್ಯ ಜನರು ಟ್ವಿಟ್ಟರಿನಲ್ಲಿ ಸಿಎಂಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ತರುವ ಯತ್ನ ಮಾಡುತ್ತಿದ್ದಾರೆ. ಸಾವಿರಾರು ಮಂದಿ ಈ ಹ್ಯಾಶ್ ಟ್ಯಾಗ್ ಬಳಸಿ ಸೂಪರ್ ಸ್ಪೆಷಾಲಿಟಿ ಇಲ್ಲದ್ರಿಂದಾದ ತೊಂದರೆಗಳನ್ನು ಬರೆದು ಹಲವರ ಟ್ವೀಟ್ ಮಾಡುತ್ತಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ನಟ ಶಿವರಾಜ್‍ಕುಮಾರ್ ವಿಡಿಯೋದಲ್ಲಿ, ಕೊಡಗು ನಮ್ಮ ಕರ್ನಾಟಕಕ್ಕೆ ಸೇರಿದೆ. ಅದು ಯಾವಾಗಲೂ ಕರ್ನಾಟಕದಲ್ಲಿ ಇರುತ್ತೆ ಎಂಬ ಭಾವನೆ ಇದೆ. ನಮ್ಮ ದೇಶ ಕಾಯುವ ಯೋಧರು ಸಾಕಷ್ಟು ಜನ ಕೊಡಗಿನವರು ಇದ್ದಾರೆ. ಹಾಗಂತ ಬೇರೆ ಜಾತಿಯವರು ಇಲ್ಲ ಎಂದು ನಾನು ಹೇಳುತ್ತಿಲ್ಲ. ಸಾಕಷ್ಟು ಜನ ಕೊಡುಗಿನವರೇ ಹೋಗುತ್ತಿದ್ದಾರೆ. ಕೊಡಗಿನ ಜನತೆಗೆ ಆಸ್ಪತ್ರೆಯ ಸೌಲಭ್ಯಗಳು ಇಲ್ಲ ಎಂಬ ವಿಷಯ ತಿಳಿಯಿತು. ಕೊಡಗು ಜನತೆ ನೊಂದುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿಮ್ಮ ಜೊತೆ ಇದ್ದೇವೆ. ಚಿತ್ರರಂಗದ ಪರವಾಗಿ ನಾವೆಲ್ಲಾ ಸೇರಿ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇವೆ.
ತಕ್ಷಣ ಉಪಯೋಗ ಆಗುವ ಚಿಕ್ಕ-ಚಿಕ್ಕ ವಸ್ತುಗಳು ಆಸ್ಪತ್ರೆಯಲ್ಲಿ ಸಿಗಬೇಕು. ಎಲ್ಲ ಹಳ್ಳಿ, ಚಿಕ್ಕ- ಚಿಕ್ಕ ಊರಿನಲ್ಲಿ ಆಸ್ಪತ್ರೆ ಇರಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಕೊಡಗಿನ ಜನತೆ ಹೆದರಿಕೊಳ್ಳುವ ಅಗತ್ಯ ಇಲ್ಲ. ಏಕೆಂದರೆ ನಾವು ನಿಮ್ಮ ಜೊತೆ ಇದ್ದೇವೆ. ಸರ್ಕಾರ ಬಳಿ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.