ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಬಳಿ ಕೈತುಂಬಾ ಸಿನಿಮಾಗಳಿವೆ. ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣ ಸದ್ದು ಮಾಡುತ್ತಾರೆ. ಈಗ ‘ಭೈರವನ ಕೊನೆ ಪಾಠ’ ಹೇಳೋಕೆ ಶಿವಣ್ಣ ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದ ‘ಭೈರವನ ಕೊನೆ ಪಾಠ’ (Bhairavana Kone Paata) ಚಿತ್ರದಲ್ಲಿ ವಯಸ್ಸಾದ ಸೈನಿಕನ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಸೈನಿಕನಂತೆ ಕಾಣುವ ಭೈರವನ ಪೋಷಾಕು, ಬತ್ತಳಿಕೆ ಬಾಣ ಎಲ್ಲವೂ ಇದು ದಶಕಗಳ ಹಿಂದಿನ ಕಥೆ ಎನ್ನುವುದನ್ನು ಸಾರಿ ಹೇಳುವಂತಿದೆ. ಭೈರವ ಯಾವುದೋ ರಾಜ್ಯದ ಸೇನಾಪತಿಯಂತೆ ಕಾಣುತ್ತಿದ್ದಾರೆ. ಈ ಲುಕ್ ನೋಡಿ ಫ್ಯಾನ್ಸ್ ಬೆಂಕಿ ಎಂದು ಕಾಮೆಂಟ್ ಮಾಡಿದ್ದಾರೆ. ಪೋಸ್ಟರ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
Bhairava is here!!!#BhairavanaKonePaaTa #BKP #VaishakJFilms #Shivarajkumar @hemanthrao11 #VaishakJGowda @Vaishak_J_Films @The_BigLittle
Poster design : #FilmyJam
Picture credit : @sharathpadaru pic.twitter.com/zYFPXly8vR
— DrShivaRajkumar (@NimmaShivanna) July 8, 2024
ಶಿವಣ್ಣನ ಈ ಸಿನಿಮಾವನ್ನು ವೈಶಾಖ್ ಜೆ. ಗೌಡ ನಿರ್ಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ:‘ಬಿಲ್ಲಾ ರಂಗ ಭಾಷಾ’ ಚಿತ್ರಕ್ಕೆ ಸುದೀಪ್ ಸಖತ್ ಫಿಟ್ ಆಗಬೇಕು- ನಿರ್ದೇಶಕ ಅನೂಪ್ ಭಂಡಾರಿ
ಈ ಚಿತ್ರದ ಜೊತೆ ಭೈರತಿ ರಣಗಲ್, ಉತ್ತರಾಕಾಂಡ, ರಾಮ್ ಚರಣ್ (Ram Charan) ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿವೆ.