ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivarajkumar) ಇಂದು (ಜು.12) ಹುಟ್ಟುಹಬ್ಬ ಸಂಭ್ರಮ. ಈ ದಿನ ‘ಭೈರತಿ ರಣಗಲ್’ (Bhairathi Rangal) ಸಿನಿಮಾ ಟೀಸರ್ ರಿಲೀಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗಿಫ್ಟ್ ಕೊಟ್ಟಿದೆ ಚಿತ್ರತಂಡ. ಸಖತ್ ರಗಡ್ ಆಗಿ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ. ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಟೀಸರ್ ಟ್ರೆಂಡಿಂಗ್‌ನಲ್ಲಿದೆ.
ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಶಿವಣ್ಣ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲಾ ತುಂಬಾ ಜನ ತಲೆಗಳನ್ನು ಕಳೆದುಕೊಂಡಿದ್ದಾರೆ ಎಂದು ಖಡಕ್ ಆಗಿ ಶಿವಣ್ಣ ಡೈಲಾಗ್ ಹೊಡೆದಿದ್ದಾರೆ. ಶಿವಣ್ಣ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನರಾದ ನಿರೂಪಕಿ ಅಪರ್ಣಾ
View this post on Instagram
ಅಂದಹಾಗೆ, ಈ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣಗೆ ರುಕ್ಮಿಣಿ ವಸಂತ್ (Rukmini Vasanth) ಜೋಡಿಯಾಗಿದ್ದಾರೆ. ಈ ಚಿತ್ರ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ.
ಇನ್ನೂ ಶಿವಣ್ಣ ಹುಟ್ಟುಹಬ್ಬದಂದು ‘ಭೈರತಿ ರಣಗಲ್’ ಚಿತ್ರದ ಅಪ್‌ಡೇಟ್ ಜೊತೆ ‘ಘೋಸ್ಟ್ 2′, ’45’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿಸದೆ. ಶ್ರೀನಿ ಜೊತೆ ‘ದಳವಾಯಿ’ ಸಿನಿಮಾ ಮಾಡೋದಾಗಿ ಅಧಿಕೃತವಾಗಿ ಅನೌನ್ಸ್‌ಮೆಂಟ್ ಹೊರಬಿದ್ದಿದೆ.