ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹವಾ ಕ್ರಿಯೇಟ್ ಮಾಡಿದ ಚಿತ್ರ ಅಂದರೆ ‘ಮಫ್ತಿ’ (Mufti) ಸಿನಿಮಾ. ಶಿವಣ್ಣ- ನರ್ತನ್ (Narthan) ಕಾಂಬೋದಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ಇದೀಗ ಇದೇ ಸಿನಿಮಾದ ಪ್ರೀಕ್ವೆಲ್ ಜೊತೆ ಮಫ್ತಿ ಜೋಡಿ ‘ಭೈರತಿ ರಣಗಲ್’ ಸಿನಿಮಾ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಹಾಗಾದರೆ ಶಿವಣ್ಣಗೆ ಜೋಡಿಯಾಗೋ ಆ ನಾಯಕಿ ಯಾರು.? ಈ ಬಗ್ಗೆ ಸ್ವತಃ ಶಿವಣ್ಣ- ನಿರ್ದೇಶಕ ನರ್ತನ್ ಸ್ಪಷ್ಟನೆ ನೀಡಿದ್ದಾರೆ.

ನಮಗೆ ಶಿವಣ್ಣ ಅವರ ಡೇಟ್ ತುಂಬಾ ಮುಖ್ಯ. ಆ ಡೇಟು ಪ್ಲಸ್ ರೇಟು ಮ್ಯಾಚ್ ಆದರೆ ಯಾರಾದರೂ ಓಕೆ ಅಂತಾ ನಗುತ್ತಾ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಶಿವಣ್ಣ ಮಾತನಾಡಿ, ನಾಯಕಿಯ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೋ ಅವರೇ ಹಾಕಿಕೊಳ್ತೀವಿ. ಅದಕ್ಕೆ ಕನ್ನಡ ನಟಿ ಪರಭಾಷಾ ನಟಿ ಎಂಬುದು ಇಲ್ಲ. ಆ ಪಾತ್ರಕ್ಕೆ ಹೊಂದುವಂತಹ ನಟಿಯನ್ನ ಆಯ್ಕೆ ಮಾಡ್ತೀವಿ ಅಂತಾ ತಿಳಿಸಿದ್ದಾರೆ. 100% ಕನ್ನಡದ ನಟಿಯನ್ನ ಹಾಕಬಾರದು ಅಂತಾ ಏನಿಲ್ಲ. ನಮ್ಮ ಭಾಷೆಯ ನಟಿ ಸೂಟ್ ಆಗುತ್ತಾರೆ ಅಂದರೆ ಚಿತ್ರಕ್ಕೆ ಹಾಕಿಕೊಳ್ಳಲು ಯಾವುದೇ ಬೇಸರವಿಲ್ಲ. ಆದರೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅದೊಂದು ಪ್ರಬುದ್ಧ ಪಾತ್ರ ಎಂದು ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್
‘ಭೈರತಿ ರಣಗಲ್’ ಸಿನಿಮಾ ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ. ಬಳ್ಳಾರಿ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ‘ಭೈರತಿ ರಣಗಲ್’ ಚಿತ್ರ ನಿರ್ಮಾಣವಾಗಲಿದೆ.


