ತಮಿಳು ನಟ ಸಿದ್ದಾರ್ಥ್ ನಟನೆಯ ‘ಚಿಕ್ಕು’ (Chikku Film) ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿರೋದ್ದಕ್ಕೆ ನಟ ಶಿವಣ್ಣ (Shivarajkumar) ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥ್‌ಗೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಇದನ್ನೂ ಓದಿ:ಕಿಶನ್ ಜೊತೆ ಸೊಂಟ ಬಳುಕಿಸಿದ ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು
ನಿನ್ನೆಯಷ್ಟೇ ನಟ ಸಿದ್ಧಾರ್ಥ್ (Siddarth) ‘ಚಿಕ್ಕು’ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರ ಮಾಡದಂತೆ ಕೆಲ ಕನ್ನಡಪರ ಹೋರಾಟಗಾರರು ತಡೆದ ವಿಚಾರದ ಕುರಿತು ಶಿವಣ್ಣ ಮಾತನಾಡಿದ್ದಾರೆ. ನಾವು ಏನೇ ಮಾಡಿದರೂ ಬೇರೆಯವರಿಗೆ ಹರ್ಟ್ ಆಗಬಾರದು. ಆಗಿರುವ ಘಟನೆ ತಪ್ಪು. ಹೀಗೆಲ್ಲ ಮಾಡಬಾರದು ಎಂದು ಮಾತನಾಡಿದ್ದಾರೆ.
ಕನ್ನಡಿಗರೆಂದರೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವವರು. ಪ್ರತಿಯೊಬ್ಬರನ್ನು ಸ್ವಾಗತಿಸುವವರು ಎಂಬ ಭಾವನೆ ಇದೆ. ಅದಕ್ಕೆ ನಾವು ಚ್ಯುತಿ ತರಬಾರದು. ಸಿದ್ಧಾರ್ಥ್‌ಗೆ ಈ ಮೂಲಕ ನಾನು ಕ್ಷಮೆ ಕೇಳುತ್ತೇನೆ ಎಂದು ಶಿವಣ್ಣ ಮಾತನಾಡಿದ್ದಾರೆ.
ಕಾವೇರಿ ಸಮಸ್ಯೆ ಈಗಿನದ್ದಲ್ಲ. ಆವಾಗಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಸಮಸ್ಯೆ ಎಲ್ಲಿದೆ? ಯಾರು ಮಾಡುತ್ತಿರುವುದು? ಯಾಕೆ ಪರಿಹಾರ ಸಿಗುತ್ತಿಲ್ಲ ಎಂದು ಪ್ರಾಮಾಣಿಕವಾಗಿ ನೋಡಬೇಕಿದೆ. ಯಾವ ರಾಜ್ಯದವರಾದರೂ ಅವರು ರೈತರೆ. ಅದರಲ್ಲಿ ಭೇದ ಭಾವ ಮಾಡಬಾರದು. ಎರಡೂ ಸರಕಾರಗಳು ಕೂತುಕೊಂಡು ಚರ್ಚೆ ಮಾಡಿ ಸಮಸ್ಯೆಯನ್ನು ಸರಿ ಮಾಡಬೇಕು ಎಂದಿದ್ದಾರೆ ನಟ ಶಿವರಾಜ್ ಕುಮಾರ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಕಾವೇರಿ ನದಿ ನೀರು ಹೋರಾಟದ ಕಾರ್ಯಕ್ರಮದಲ್ಲಿ ಶಿವಣ್ಣ ಮಾತನಾಡಿ, ಕಲಾವಿದರ ಹೋರಾಟಕ್ಕೆ ಬರೊಲ್ಲಅಂತೀರಾ. ಕಲಾವಿದರು ಬಂದು ಏನ್ ಮಾಡ್ಬೇಕು?. ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದ್ರೆ ಸಮಸ್ಯೆ ಬಗೆಹರಿಯುತ್ತಾ?. ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು ಎಂದರು.
ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ದರ್ಶನ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ವಸಿಷ್ಠ ಸಿಂಹ, ಧ್ರುವ ಸರ್ಜಾ, ಪೂಜಾ ಗಾಂಧಿ, ಶ್ರುತಿ, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.