ಬೆಂಗಳೂರು: ಪುನೀತ್ ರಾಜ್ಕುಮಾರ್ ಜೊತೆಗೆ ಕಳೆದ ಸಿಹಿ ನೆನಪುಗಳನ್ನು ನಟ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮೆಲುಕು ಹಾಕುತ್ತಿದ್ದಾರೆ.
View this post on Instagram
Advertisement
ಪುನೀತ್ ಅಗಲಿ ಇಂದಿಗೆ 9ನೇ ದಿನ ಕಳೆದಿದೆ. ಪುನೀತ್ ಅಗಲಿಕೆಯ ಅಘಾತದಿಂದ ಕರುನಾಡಿನ ಜನತೆ ಹೊರ ಬಂದಿಲ್ಲ. ಅಪ್ಪು ನೆನೆದು ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ಮಧ್ಯೆ ತಮ್ಮನನ್ನು ಕಳೆದುಕೊಂಡು ಸಹೋದರ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಕೂಡ ದುಃಖದಲ್ಲಿದ್ದಾರೆ. ಪ್ರತಿ ದಿನ ತಮ್ಮನೊಂದಿಗಿನ ಕಳೆದ ಹಳೆಯ ಸಿಹಿ ನೆನಪುಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮೆಲುಕು ಹಾಕುತ್ತಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಇಸಿಜಿ ಟೆಸ್ಟ್ನಲ್ಲಿ ಹಾರ್ಟ್ ಅಟ್ಯಾಕ್ ಸುಳಿವು: ಡಾ. ರಮಣ ರಾವ್
Advertisement
View this post on Instagram
Advertisement
ರಾಘವೇಂದ್ರ ರಾಜ್ ಕುಮಾರ್ ಅವರು, ಅಪ್ಪು ಅಪ್ಪ ಅಮ್ಮನ ಬಳಿ ಕೈ ತುತ್ತು ತಿನ್ನುತ್ತಿರುವ, ಚಿಕ್ಕವರಿದ್ದಾಗ ತಮ್ಮನನ್ನು ಮಡಿಲ ಮೇಲೆ ಕೂರಿಸಿಕೊಂಡು ಕ್ಲಿಕ್ಕಿಸಿಕೊಂಡಿರುವ ಫೋಟೋ, ಫ್ಯಾಮಿಲಿ ಫೋಟೋ, ಅಪ್ಪು ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಕೊನೆಯ ಫೋಟೋ, ಅಪ್ಪು ಬರ್ತ್ಡೇ ವೀಡಿಯೋ, ಡಾ. ರಾಜ್ಕುಮಾರ್ ಜೊತೆಗಿರುವ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ರೀತಿ ಶಿವಣ್ಣ ಫ್ಯಾನ್ಸ್ ಪೇಜ್ನಲ್ಲಿ ಪುನೀತ್ ಜೊತೆ ಶಿವಣ್ಣ ಇರುವ ಹಲವಾರು ಫೋಟೋಗಳು ಪ್ರತಿ ನಿತ್ಯ ಶೇರ್ ಮಾಡಲಾಗುತ್ತಿದೆ. ಇದನ್ನೂ ಓದಿ: ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ
Advertisement
View this post on Instagram
ಒಟ್ಟಾರೆ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ಎಲ್ಲರೊಂದಿಗೆ ಇಲ್ಲದಿದ್ದರೂ ಅವರ ಮಾತು, ನಡತೆ, ನಟನೆ, ಡ್ಯಾನ್ಸ್, ನಗು ಎಲ್ಲವು ಎಂದಿಗೂ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ.