ಕೊಪ್ಪಳ: ಸಿಎಂ ಸಿದ್ದರಾಮಯ್ಯ (Siddaramaiah) ಮುಂದೆ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegade) ಪುಟಗೋಸಿಗೆ ಸಮನಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತೆ ಮಗನೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ.
ಕೊಪ್ಪಳ (Koppal) ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಂತ್ ಕುಮಾರ್‌ಗೆ ಅವನದೇ ಭಾಷೆಯಲ್ಲಿ ಉತ್ತರ ಕೊಡಲು ನನಗೂ ಬರುತ್ತೆ. ಆದರೆ ನನ್ನ ಹಿರಿಯರು ನನಗೆ ಸಂಸ್ಕಾರ ಕಲಿಸಿದ್ದಾರೆ. ಅದಕ್ಕಾಗಿ ಅವನಿಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತಿಲ್ಲ. ಬದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮ ಆಗುತ್ತೆ – ಅನಂತಕುಮಾರ್ ಹೆಗಡೆ ಎಚ್ಚರಿಕೆ
- Advertisement
ಇದೇ ಮೊದಲು ಮತ್ತು ಕೊನೆ. ಸಿದ್ದರಾಮಯ್ಯ ಬಗ್ಗೆ ಅವನು ಮಾತನಾಡಬಾರದು. ಸಿದ್ದರಾಮಯ್ಯ ಅವರಿಗೆ ಆಗಿರುವ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಅವರ ಕಾಲಿನ ಧೂಳಿಗೂ ಹೆಗಡೆ ಸಮನಲ್ಲ. ನಾನೂ ಕೂಡ ಹೀಗೆ ಮಾತನಾಡಬಾರದು. ಆದರೆ ಅವನಾಡಿದ ಮಾತಿನಿಂದ ನೋವಾಗಿ ಹೀಗೆ ಹೇಳಿದ್ದೇನೆ. ಇಂಥ ನಾಯಿಗಳಿಗೆ ನಾವು ಬುದ್ಧಿ ಕಲಿಸುತ್ತೇವೆ. ಹೀಗೆ ಮಾತು ಮುಂದುವರೆಸಿದರೆ, ನಾನು ಮುಂದೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಉತ್ತರ ಕೊಡ ಬೇಕಾಗುತ್ತೆ. ಇವನಿಗಿಂತ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
- Advertisement
ಸಿದ್ದರಾಮಯ್ಯ, ಪ್ರಧಾನಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಮೋದಿ ಅವರಿಗೆ ಬಾಯಿ ತಪ್ಪಿ ಏಕವಚನದಲ್ಲಿ ಮಾತನಾಡಿರಬಹುದು. ಆದರೆ ಇಂಥ ಕೆಟ್ಟ ಭಾಷೆ ಬಳಿಸಿ ಮಾತನಾಡಿಲ್ಲ. ಸಿದ್ದರಾಮಯ್ಯ ಇಡೀ ದೇಶದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಗೆ ಅನಂತ್ ಕುಮಾರ್ ಪುಟಗೋಸಿಗೆ ಸಮ. ಬಿಜೆಪಿಗರಿಗೆ ಚುನಾವಣೆ ಬಂದಾಗ ಮಾತ್ರ ಪಾಕಿಸ್ತಾನ, ಹಿಂದೂ-ಮುಸ್ಲಿಂ, ಹಿಂದೂಗಳ ದೇವಾಲಯ ನೆನಪಾಗುತ್ತವೆ ಎಂದು ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು