ಕಾಂಗ್ರೆಸ್‌ನಲ್ಲಿ ಯಾರೂ ಯಾರನ್ನೂ ಮುಗಿಸಲು ಆಗಲ್ಲ: ಶಿವರಾಜ್ ತಂಗಡಗಿ

Public TV
1 Min Read
Error in copy minister Shivaraj Tangadagi clarifies Nada Geethe not compulsory in private schools order

ಬೆಂಗಳೂರು: ನಮ್ಮಲ್ಲಿ ಎಸ್‌ಟಿ ನಾಯಕರು ಸೇರಿದಂತೆ ಎಲ್ಲಾ ಸಮುದಾಯದ ನಾಯಕರೂ ಇದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಎಸ್‌ಟಿ ನಾಯಕರಿದ್ದಾರೆ. ಯಾರೂ ಸಹ ಯಾರನ್ನೂ ಮುಗಿಸಲು ಆಗಲ್ಲ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದ್ದಾರೆ.

ವಿಕಾಸಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾಮುಲು, ರೆಡ್ಡಿ ಅವರವರ ಕಚ್ಚಾಟದಿಂದ ಕಾಂಗ್ರೆಸ್‌ಗೆ (Congress) ಬರ್ತಾ ಇದಾರೆ ಎಂದು ಹೇಳ್ತಾ ಇದಾರೆ. ರಾಮುಲು ಅವರನ್ನು ಪಕ್ಷದಿಂದ ಹೊರಗೆ ಹಾಕಬೇಕು ಎನ್ನುತ್ತಿದ್ದಾರೆ ಎಂದು ನಮ್ಮ ಅಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ (BJP) ಒಡೆದ ಮನೆ, ಮೂರು ಬಾಗಿಲು, ನಮ್ಮ ಪಕ್ಷದಲ್ಲಿ 12 ಬಾಗಿಲು ಇಲ್ಲ ಎಂದಿದ್ರು ಎಂದು ವ್ಯಂಗ್ಯವಾಡಿದ್ದಾರೆ.

ರಾಮುಲು (Sriramulu) ಪಕ್ಷಕ್ಕೆ ಬಂದ್ರೆ ಸ್ವಾಗತ. ಅಗತ್ಯತೆ ಅಂತೇನಿಲ್ಲ, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇನೆ. ರಾಮುಲು, ರೆಡ್ಡಿ ಜಗಳದಿಂದ ಯಾರು ಜಾಸ್ತಿ ಸುಳ್ಳು ಹೇಳ್ತಾರೆ ಎಂಬ ವಾಸ್ತವ ಗೊತ್ತಾಗ್ತಿದೆ ಎಂದು ಇದೇ ವೇಳೆ ಜನಾರ್ದನ ರೆಡ್ಡಿಯವರಿಗೆ (Janardhana Reddy) ತಿರುಗೇಟು ನೀಡಿದ್ದಾರೆ.

Share This Article