ಕೊಪ್ಪಳ: ಯಾರಾದರೂ ಸತ್ತರೆ ಅದು ದುಃಖ. ಆದರೆ ಆ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಾರೆ. ಯಾರು ಎಲ್ಲೇ ಸತ್ತರೂ ಅದನ್ನೇ ಇಟ್ಟುಕೊಂಡು ಬಿಜೆಪಿಯವರು ದುಷ್ಟ ರಾಜಕಾರಣ ಮಾಡುತ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ಹೊರಹಾಕಿದರು.
ಚಂದ್ರು ಕೊಲೆ ಪ್ರಕರಣ ಕುರಿತಾಗಿ ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ತಂಗಡಗಿ, ಕಮಲ್ ಪಂಥ್ ಒಳ್ಳೆಯ ಆಡಳಿತಗಾರ. ಆದರೆ ಹೋಂ ಮಿನಿಸ್ಟರ್‌ಗೆ ನಾಚಿಕೆ, ಮಾನ ಇಲ್ಲ. ಕೊಲೆ ವಿಚಾರ ಅವರಿಗೆ ಗೊತ್ತಿರುತ್ತಾ ಅಥವಾ ಅಧಿಕಾರಿಗಳಿಗೆ ಗೊತ್ತಿರುತ್ತಾ? ಹೋಂ ಮಿನಿಸ್ಟರ್‌ಗೆ ಜ್ಞಾನ ಇದೆಯೋ ಇಲ್ಲವೋ ಎಂಬುದನ್ನು ಹುಡುಕಬೇಕಿದೆ. ಹೆಣದ ಮೇಲೆ ರಾಜಕಾರಣ ಮಾಡುವುದನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಚುನಾವಣೆ ಬಂದ ತಕ್ಷಣ ಪಾಕಿಸ್ತಾನ, ಸೈನಿಕರು ಹಾಗೂ ಧರ್ಮ ನೆನಪಾಗುತ್ತದೆ ಎಂದು ತಂಗಡಗಿ ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ: ಬೊಮ್ಮಾಯಿ
Advertisement
Advertisement
ಕೇಸರಿ ಬಿಜೆಪಿಯವರ ಅಪ್ಪನ ಆಸ್ತಿ ಅಲ್ಲ. ಕೇಸರಿ ನನ್ನದು, ನಾನು ಹಿಂದೂ, ಬಿಜೆಪಿಯವರು ಕೆಟ್ಟ ಹಿಂದೂ ಹುಳಗಳು. ಕೇಸರಿ ತ್ಯಾಗದ ಸಂಕೇತ. ಆದರೆ ಇವರು ಕೇಸರಿ ಹಾಕಿಕೊಂಡು ಬೆಂಕಿ ಹಚ್ಚುತ್ತಾರೆ. ಕಾಳಿ ಸ್ವಾಮಿಗಳೇ ನಿಮಗೆ ಕೈ ಮುಗಿಯುತ್ತೇನೆ. ಕೇಸರಿ ಹಾಕೊಂಡು ಕೋಳಿ ಕಟ್ ಮಾಡಬೇಡಿ. ಕೇಸರಿಗೆ ಒಂದು ಶಕ್ತಿ ಇದೆ. ಕೇಸರಿ ಹಾಕಿಕೊಂಡು ಕೋಳಿ ಕೊಯ್ಯುತ್ತೇನೆ ಅಂದ್ರೆ ಏನ್ ರೀ ಎಂದು ಕಿಡಿಯಾದರು. ಇದನ್ನೂ ಓದಿ: ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ
Advertisement
ರಾಜ್ಯದಲ್ಲಿ ನಡೆಯೋ ಘಟನೆಗಳ ಹಿಂದೆ ಬೊಮ್ಮಾಯಿ ಇದ್ದಾರೆ. ಇಡೀ ಸರ್ಕಾರದ ಬೆಳವಣಿಗೆ ಮಂತ್ರಿ ಮಂಡಲದಿಂದಲೇ ನಡೆಯುತ್ತಿದೆ. ಆದರೂ ರಾಜ್ಯದ ಮುಖ್ಯಮಂತ್ರಿ ಒಂದು ಮಾತು ಆಡುತ್ತಿಲ್ಲ. ಕಲ್ಲಂಗಡಿ ಕಿತ್ತು ಬಿಸಾಡುತ್ತಿದ್ದರೂ ಇವರದ್ದು ಎಂತಹ ಮನಸ್ಥಿತಿ? ಸರ್ಕಾರದ ಕುಮ್ಮಕ್ಕಿನಿಂದಲೇ ಇದೆಲ್ಲಾ ನಡೆಯುತ್ತಿದೆ. ಹೋಮ್ ಮಿನಿಸ್ಟರ್ ಇರುವುದೇ ವೇಸ್ಟ್ ಎಂದು ತಂಗಡಗಿ ಹರಿಹಾಯ್ದರು.