ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಶಿವರಾಜಕುಮಾರ್ ಮತ್ತು ಪ್ರಭುದೇವ ನಾಯಕರಾಗಿ ನಟಿಸಿರುವ ‘ಕರಟಕ ದಮನಕ’ (Karataka Damanaka) ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಲುವಾಗಿ ನಟ ಶಿವರಾಜಕುಮಾರ್ ಉತ್ತರ ಕರ್ನಾಟಕದ (North Karnataka) ಕಡೆ ವಿಜಯ ಯಾತ್ರೆ ಹೊರಟಿದ್ದಾರೆ.
ಕೇವಲ ಶಿವರಾಜ್ ಕುಮಾರ್ (Shivaraj Kumar) ಮಾತ್ರವಲ್ಲ, ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಉಪಸ್ಥಿತರಿರುತ್ತಾರೆ. ಅಲ್ಲಿನ ಸ್ಥಳಿಯ ಜನರ ಸಂದರ್ಶನ, ಚಿತ್ರಮಂದಿರಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ಸಹ ನಡೆಸಲಿದ್ದಾರೆ.
ಇಂದು ಶುರುವಾಗುವ ಯಾತ್ರೆ ನಾನಾ ಊರುಗಳಲ್ಲಿ ಸಂಚರಲಿಸಲಿದೆ. ಇಂದು ಬೆಳಗ್ಗೆ ಬೆ.9.30 ರಿಂದ10.30 ಚಿತ್ರದುರ್ಗದ ಬಸವೇಶ್ವರ ಚಿತ್ರಮಂದಿರ, ಮಧ್ಯಾಹ್ನ 12.30 ರಿಂದ 2 ರವರೆಗೆ ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರ ಸಂಜೆ 4 ರಿಂದ 5.30ರವರೆಗೂ ಹೊಸಪೇಟೆಯ ಸರಸ್ವತಿ ಚಿತ್ರಮಂದಿರದಲ್ಲಿ ಸಂಜೆ 6 ರಿಂದ 7 ಬಳ್ಳಾರಿಯ ಗಂಗಾ ಚಿತ್ರಮಂದಿರದಲ್ಲಿ ಚಿತ್ರತಂಡ ಸಿಗಲಿದೆ.