‘ಮಿಲ್ಲರ್ ಕ್ಯಾಪ್ಟನ್’ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

Public TV
1 Min Read
Captain Miller 2

ಸಂಕ್ರಾಂತಿ ಸಂಭ್ರಮವನ್ನು ಡಬಲ್ ಮಾಡೋದಿಕ್ಕೆ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಕ್ಯಾಪ್ಟನ್ ಮಿಲ್ಲರ್. ಕನ್ನಡಿಗರು ಕಾತುರದ ಕಣ್ಣುಗಳಿಂದ ಈ ಚಿತ್ರ ಎದುರು ನೋಡುತ್ತಿರುವುದಕ್ಕೆ ಕಾರಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಧನುಷ್ ನಾಯಕನಾಗಿ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.  ಈಗಾಗಲೇ ಟೀಸರ್ ಹಾಗೂ ಎರಡು ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಮೂರನೇ ಸಾಂಗ್ ಅನಾವರಣಗೊಂಡಿದೆ.

Captain Miller 1

ಬಹು ಭಾಷೆಯಲ್ಲಿ ಹಾಡು ರಿಲೀಸ್ ಆಗಿದ್ದು, ಕನ್ನಡದಲ್ಲಿ ಪ್ರಮೋದ್ ಜೋಯಿಸಿ  ಸಾಹಿತ್ಯ ಬರೆದಿದ್ದು, ದರ್ಶನ್ ನಾರಾಯಣ್ ಹಾಗೂ ಶೆಂಬಾಗರಾಜ್ ಧ್ವನಿಯಾಗಿದ್ದಾರೆ. ಜಿ.ವಿ.ಪ್ರಕಾಶ್ ಸಂಗೀತ ಈರಪ್ಪನು ಎಂಬ ಸಾಹಿತ್ಯದ ಮಸ್ತ್ ಗಾನಬಜಾನಕ್ಕೆ ಶಿವಣ್ಣ ಧನುಷ್ ಕುಣಿದು ಕುಪ್ಪಳಿಸಿದ್ದಾರೆ.

Captain Miller 3

ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನಿಮಾ  ಆಗಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿಯ ಈ ಚಿತ್ರ ಬರುತ್ತಿದೆ. ಹಾಗಾಗಿಯೇ ಈ ಹಾಡನ್ನ ಬಹು ಭಾಷೆಯಲ್ಲಿಯೇ ಬಿಡುಗಡೆ ಮಾಡಲಾಗಿದೆ. ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೇ ಶಿವರಾಜ್‌ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ. ಸದ್ಯ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ವಿಶ್ವದಾದ್ಯಂತ ತೆರೆ ಕಾಣಲಿದೆ.

Share This Article