ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಡಾಲಿ ಧನಂಜಯ್ (Dolly Dhananjay) ಕುರಿತಾದ ಹಲವು ವಿಷಯಗಳು ಅಭಿಮಾನಿಗಳಿಗೆ ಗೊತ್ತಾಗಿವೆ. ಅವರ ಸಿನಿಮಾ, ವೈಯಕ್ತಿಕ ಬದುಕು, ಅವರ ಸಾಧನೆ ಹೀಗೆ ನಾನಾ ವಿಷಯಗಳನ್ನು ಡಾಲಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಡಾಲಿಯ ಮದುವೆ (Marriage) ಕುರಿತು ಚರ್ಚೆ ಕೂಡ ನಡೆದಿದೆ. ಸ್ವತಃ ಡಾಲಿ ಕುಟುಂಬವೇ ಬೇಗ ಮದುವೆ ಆಗು ಎಂದು ಕೇಳಿತ್ತು. ಆಗ ನಕ್ಕು ಸುಮ್ಮನಾಗಿದ್ದರು ಧನಂಜಯ್.
ಡಾಲಿ ಮದುವೆ ಕುರಿತು ಸ್ವತಃ ಶಿವರಾಜ್ ಕುಮಾರ್ (Shivaraj Kumar) ಕೂಡ ಪ್ರಸ್ತಾಪ ಮಾಡಿದ್ದಾರೆ. ಬೇಗ ಮದುವೆ ಆಗು ಡಾಲಿ ಎಂದು ಪ್ರಶ್ನೆ ಮಾಡಿದ್ದಾರೆ. ಶಿವಣ್ಣ ಮದುವೆ ವಿಚಾರ ಕೇಳುತ್ತಿದ್ದಂತೆಯೆ ಡಾಲಿ ನಗುತ್ತಲೇ ‘ನೀವು ಹೇಳಿದ್ಮೇಲೆ ಇಲ್ಲ ಅನ್ನೋಕೆ ಆಗತ್ತಾ ಅಣ್ಣ, ಹುಡುಗಿ ಸಿಕ್ಕ ತಕ್ಷಣವೇ ಮದುವೆ’ ಎಂದಿದ್ದಾರೆ. ಈ ಮೂಲಕ ತಾವು ಹುಡುಗಿ ಹುಡುಕುತ್ತಿರುವ ವಿಚಾರವನ್ನೂ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!
ಡಾಲಿ ಮತ್ತು ಅಮೃತಾ ಅಯ್ಯಂಗಾರ್ ಕುರಿತು ಅನೇಕ ಗಾಸಿಪ್ ಗಳು ಕೇಳಿ ಬಂದಿದ್ದವು. ಡಾಲಿ ಆಪ್ತರು ಕೂಡ ಇದಕ್ಕೆ ಪುಷ್ಠಿ ನೀಡುವಂತಹ ಮಾತುಗಳನ್ನು ಆಡಿದ್ದರು. ಆದರೆ, ಡಾಲಿ ಈ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಪ್ರೀತಿ ಪ್ರೇಮದ ವಿಷಯವನ್ನೂ ಮಾತನಾಡಲಿಲ್ಲ. ಅಮೃತಾ ಅಯ್ಯಂಗಾರ್ ಜೊತೆಗಿನ ಪ್ರೇಮವನ್ನು ಗಾಸಿಪ್ ಎನ್ನುವಂತೆ ಮತ್ತೆ ತೇಲಿಸಿಬಿಟ್ಟರು.
ಧನಂಜಯ್ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಈ ಶೋ ಜನರ ಮುಂದಿಟ್ಟಿದೆ. ಅನೇಕರು ಭಾವುಕರಾಗಿಯೇ ಎರಡೂ ಕಂತುಗಳನ್ನು ನೋಡಿದ್ದಾರೆ. ಧನಂಜಯ್ ಮೇಲೆ ಮತ್ತಷ್ಟು ಅಭಿಮಾನವನ್ನು ತೋರಿದ್ದಾರೆ. ಇಡೀ ಕಾರ್ಯಕ್ರಮ ಒಂದು ರೀತಿಯಲ್ಲಿ ಭಾವುಕತೆಯಲ್ಲಿಯೇ ಕೊನೆಗೊಂಡಿತು.