ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ಚಿರಂಜೀವಿಗೆ (Shivaraj Kumar) ದೇಶ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (Padma Vibhushan) ದೊರೆತಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಹೈದರಾಬಾದ್ ನ ಚಿರಂಜೀವಿ (Chiranjeevi) ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಂದಿಸಿದ ಫೋಟೋವನ್ನು ಚಿರಂಜೀವಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
- Advertisement -
ಚಿರಂಜೀವಿ ಕುಟುಂಬಕ್ಕೂ ಮತ್ತು ಡಾ.ರಾಜ್ ಕುಮಾರ್ ಕುಟುಂಬಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. ಅನೇಕ ಕಾರ್ಯಕ್ರಮಗಳಲ್ಲಿ ಚಿರಂಜೀವಿ ಕುಟುಂಬ ಭಾಗಿಯಾಗಿದೆ. ಹಾಗಾಗಿ ಶಿವರಾಜ್ ಕುಮಾರ್, ಭೇಟಿ ನೀಡಿ ಅಭಿನಂದಿಸಿದ್ದಾರೆ. ಶಿವಣ್ಣ ಒಟ್ಟಿಗೆ ಕಳೆದ ಸಮಯವನ್ನು ಚಿರು ನೆನಪಿಸಿಕೊಂಡಿದ್ದಾರೆ.
- Advertisement -
- Advertisement -
ಈ ನಡುವೆ ಚಿರಂಜೀವಿ ಪುತ್ರ ರಾಮ್ ಚರಣ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಕಥೆ ಕೇಳಿರುವ ಕುರಿತು ಈ ಹಿಂದೆ ಶಿವಣ್ಣ ಕೂಡ ಒಪ್ಪಿಕೊಂಡಿದ್ದರು. ಅಲ್ಲದೇ ರಾಮ್ ಚರಣ್ ಮದುವೆಗೂ ಪುನೀತ್ ರಾಜ್ ಕುಮಾರ್ ಮತ್ತು ಶಿವಣ್ಣ ಹೋಗಿದ್ದರು.