ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಗರದಲ್ಲಿನ ಟ್ರಾಫಿಕ್ ಜಾಮ್‍ಗೆ ಬೇಸತ್ತು ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರ ಹಾಕಿದರು.
ಮಾನ್ಯತಾ ಟೆಕ್‍ಪಾರ್ಕ್ ರೆಸಿಡೆನ್ಸಿ ಅಸೋಸಿಯೇಷನ್‍ನಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನ ನಿತ್ಯ ಬೆಳಗ್ಗೆ ಹಾಗೂ ಸಂಜೆ ಸುಮಾರು 3 ರಿಂದ 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗುತ್ತದೆ. ಇಲ್ಲಿನ ನಿವಾಸಿಗಳಿಗೆ ಮನೆಯಿಂದ ಹೊರಗೆ ಹೋಗಬೇಕು ಎಂದರೆ ಒಂದು ಗಂಟೆಯ ಕಾಲ ಸಮಯ ತೆಗೆದುಕೊಳ್ಳತ್ತದೆ. ಈ ಟ್ರಾಫಿಕ್ ನಲ್ಲಿಯೇ ಸಮಯವೆಲ್ಲಾ ಹಾಳು ಆಗುತ್ತದೆ. ಮನೆಯಿಂದ ಯಾರಾದರೂ ಒಬ್ಬರು ಹೊರಗೆ ಹೋಗಿ ಬರಬೇಕು ಎಂದರೆ ಟ್ರಾಫಿಕ್ ಗೆಂದೇ ಜಾಸ್ತಿ ಸಮಯವನ್ನು ಇಟ್ಟುಕೊಂಡು ಹೋಗಬೇಕು. ಇದರಿಂದ ಎಲ್ಲರಿಗೂ ಬಹಳ ತೊಂದರೆಯಾಗುತ್ತದೆ ಎಂದು ಹೇಳಿದರು.
ಈ ವಿಚಾರವಾಗಿ ನಮ್ಮ ಅಸೋಸಿಯೇಷನ್ ಅವರು ಬಿಡಿಎ, ಟ್ರಾಫಿಕ್ ಪೊಲೀಸ್ ಅವರಿಗೆ ದೂರು ನೀಡಿದರೂ ಯಾರೂ ಸಹ ಇದರ ಕಡೆ ಗಮನವೇ ಹರಿಸಿಲ್ಲ. ರಸ್ತೆಗಳೆಲ್ಲಾ ಹಾಳಾಗಿ ಗುಂಡಿಬಿದ್ದು ಹೋಗಿವೆ ಎಂದು ದೂರಿದರು.
ಶೂಟಿಂಗ್ ಗೆ ಹೋಗುವಾಗಲು ನಾವು ಬೆಳಗ್ಗೆ 7:30 ರ ವೇಳೆಗೆ ಬಿಟ್ಟರೆ ಮಾತ್ರ ಬೇಗ ಹೋಗಲು ಸಾಧ್ಯವಾಗುತ್ತದೆ. ಮಾನ್ಯತಾ ಟೆಕ್ ಪಾರ್ಕ್ ರೆಸಿಡೆನ್ಸಿ ರಸ್ತೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಮಾನ್ಯತಾ ಟೆಕ್ ಪಾರ್ಕ್ ರೆಸಿಡೆನ್ಸಿಯವರು ಕೊಟ್ಟ ಆಶ್ವಾಸನೆಯನ್ನು ನೆರವೇರಿಸಲಿಲ್ಲ ಅವರ ಆದಾಯಕ್ಕೆ ತಕ್ಕಂತೆ ಅವರು ನೋಡಿ ರೆಸಿಡೆನ್ಸಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.