ಟಾಲಿವುಡ್ ನಟಸಿಂಹ ಹಾಗೂ ಸ್ಯಾಂಡಲ್‍ವುಡ್ ನರಸಿಂಹ ಮುಖಾಮುಖಿ ಆಗಿದ್ದರಿಂದ, ದಳಪತಿ ವಿಜಯ್ ಜೊತೆ ಮಾಸ್ ಮಹರಾಜನೂ ತೊಡೆತಟ್ಟಿದ್ದರಿಂದ ಬೆಳ್ಳಿತೆರೆ ಅಖಾಡ ಧಗಧಗಿಸಿತ್ತು. ದಸರಾ ದಂಗಲ್ ನಲ್ಲಿ ಈ ಭಾರಿ ಗೆಲ್ಲೋದ್ಯಾರು? ವಿಜಯದ ಕಿರೀಟ ಮುಡಿಗೇರಿಸಿಕೊಂಡು ಮುತ್ತಿನ ತೇರಲ್ಲಿ ಮೆರವಣಿಗೆ ಹೊರಡೋರು ಯಾರು? ವಿಜಯಲಕ್ಷ್ಮಿನಾ ಒಲಿಸಿಕೊಂಡು ಕೇಕೆ ಹೊಡೆಯೋರು ಯಾರು? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಈ ನಾಲ್ವರು ಸ್ಟಾರ್ಸ್ ಅಭಿಮಾನಿಗಳನ್ನ ಹಾಗೂ ದಕ್ಷಿಣ ಭಾರತೀಯ ಸಿನಿಮಾಮಂದಿಯನ್ನು ಕಾತುರದಿಂದ ಕಾಯುವಂತೆ ಮಾಡಿತ್ತು. ಕೊನೆಗೂ ದಸರಾ ದಂಗಲ್ ಗೆ ತೆರೆಬಿದ್ದಿದೆ.
Advertisement
ಬೆಳ್ಳಿತೆರೆ ಅಖಾಡದಲ್ಲಿ `ಘೋಸ್ಟ್’ (Ghost) ಘರ್ಜನೆ ಜೋರಾಗಿದ್ದು, ಭರ್ಜರಿ ಪೈಪೋಟಿ ನಡುವೆಯೂ ಬಿಗ್‍ಡ್ಯಾಡಿ ಗೆದ್ದು ಗಹಗಹಿಸಿದ್ದಾರೆ. ಕನ್ನಡಿಗರಿಂದ ಮಾತ್ರವಲ್ಲ ಪರಭಾಷಿಗರಿಂದಲೂ ಬಹುಪರಾಕ್ ಹಾಕಿಸಿಕೊಂಡು ಬೆಳ್ಳಿಭೂಮಿ ಅಂಗಳದಲ್ಲಿ ಮೆರವಣಿಗೆ ಹೊರಟಿದ್ದಾರೆ. `ಜೈಲರ್’ ನಂತರ `ಘೋಸ್ಟ್’ ಚಿತ್ರದ ಮೂಲಕ ಕಣಕ್ಕಿಳಿದ ಕರುನಾಡ ಚಕ್ರವರ್ತಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ದೊಡ್ಮನೆ ದೊರೆಯ ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳು `ಘೋಸ್ಟ್’ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ.
Advertisement
Advertisement
ದಳವಾಯಿ ಮುದ್ದಣ್ಣ ಅಲಿಯಾಸ್ ಬಿಗ್ ಡ್ಯಾಡಿ, ಆನಂದ್ ಹೆಸರಿನ ದ್ವಿಪಾತ್ರದಲ್ಲಿ ಮಿಂಚಿದ ಮುತ್ತಣ್ಣನಿಗೆ ಉಘೇ ಉಘೇ ಎಂದಿದ್ದಾರೆ. ಕಳೆದ 37 ವರ್ಷಗಳಿಂದ ಬೆಳ್ಳಿತೆರೆ ಮೇಲೆ ಶಿವಣ್ಣನ್ನ (Shivaraj Kumar) ನೋಡಿಕೊಂಡು ಬಂದಿರುವ ಅಭಿಮಾನಿಗಳು `ಘೋಸ್ಟ್’ ಸಿನಿಮಾದಲ್ಲಿ `ಆನಂದ್’ ಅವತಾರವನ್ನು ನೋಡಿ ಅಚ್ಚರಿಪಟ್ಟಿದ್ದಾರೆ. 60ರಲ್ಲೂ ಒಂದಿಂಚು ಆಚೀಚೆಯಾಗದ ಲುಕ್ಕು, ಮ್ಯಾನರಿಸಂ, ಸ್ವ್ಯಾಗ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಲುಕ್ಕು, ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ನೋಡಿ ಕಳೆದೋಗಿದ್ದಾರೆ. ರಗಡ್ ಗೆಟಪ್‍ನಲ್ಲಿ ಬಿಗ್‍ಡ್ಯಾಡಿಯಾಗಿ ಖದರ್ ತೋರಿಸಿರುವ ಸೆಂಚುರಿಸ್ಟಾರ್ ನ ನೋಡಿ ಫ್ಯಾನ್ಸ್ ಹೇಳ್ತಿರೋದು ಒಂದೇ ಡೈಲಾಗ್ `ನಿನ್ನ ಮುಂದೆ ಎಲ್ಲಾ ಬಚ್ಚ ಕಣಣ್ಣಾ’
Advertisement
ಶಿವಣ್ಣ ಹೇಳಿ ಕೇಳಿ ಮಾಸ್‍ಲೀಡರ್ ಅವ್ರನ್ನ ಇನ್ನಷ್ಟು ಮಾಸ್ ಆಗಿ ತೋರಿಸುವಲ್ಲಿ ನಿರ್ದೇಶಕ ಶ್ರೀನಿ ಗೆದ್ದಿದ್ದಾರೆ. `ಜೈಲರ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ನಟನೆಯನ್ನ ನಿರ್ದೇಶಕ ನೆಲ್ಸನ್ ಬಳಸಿಕೊಂಡ ರೀತಿ ನೋಡಿದ್ಮೇಲೆ ಕನ್ನಡ ಪ್ರೇಕ್ಷಕರಲ್ಲಿ ಒಂದು ಕೊರಗು ಶುರುವಾಗಿತ್ತು. ಕರುನಾಡ ಚಕ್ರವರ್ತಿ ನಟನೆಯಲ್ಲಿ ಉಗ್ರ ನರಸಿಂಹ. ಅವ್ರನ್ಯಾಕೆ ನಮ್ಮ ಇಂಡಸ್ಟ್ರಿಯ ನಿರ್ದೇಶಕರು ಸರಿಯಾಗಿ ಬಳಸಿಕೊಳ್ತಿಲ್ಲ ಎನ್ನುವ ಕೊಶ್ಚನ್ ರೈಸ್ ಆಗಿತ್ತು. ಅದಕ್ಕೀಗ `ಘೋಸ್ಟ್’ ಡೈರೆಕ್ಟರ್ ಶ್ರೀನಿ ಬಿಗ್ ಬ್ರೇಕ್ ಹಾಕಿದ್ದಾರೆ.
ಗನ್ನಷ್ಟೇ ಚೆನ್ನಾಗಿ ಕಣ್ಣಪ್ಪನ ಕಣ್ಣನ್ನು ಬಳಸಿಕೊಂಡು ಮೂರ್ಮೂರು ಶೇಡ್‍ನಲ್ಲಿ ಅದ್ಭುತವಾಗಿ ತೆರೆಮೇಲೆ ತೋರಿಸಿದ್ದಾರೆ. ಶ್ರೀನಿ ವಿಷನ್, ನಾನ್ ಲೀನಿಯರ್ ಸ್ಕ್ರೀನ್ ಪ್ಲೇ, ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್, ಡಿ ಏಜಿಂಗ್ ಟೆಕ್ನಾಲಜಿ ಎಲ್ಲವೂ ವರ್ಕ್ ಆಗಿದ್ದು `ಘೋಸ್ಟ್’ ಕ್ಲಿಕ್ ಆಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮ್ಯೂಸಿಕ್ ಮ್ಯಾಜಿಕ್ ಮಾಡೋದ್ರ ಜೊತೆಗೆ ಅವರ ಕರಿಯರ್ ನಲ್ಲೇ `ಘೋಸ್ಟ್’ ಮೈಲುಗಲ್ಲು ಎನ್ನುವಷ್ಟು ಮಹತ್ವ ಪಡೆದಿದೆ. ಮಾಸ್ತಿ ಹಾಗೂ ಪ್ರಸನ್ನ ಕೊಟ್ಟಿರೋ ಸಿಂಪಲ್ ಡೈಲಾಗ್ಸ್ `ಘೋಸ್ಟ್’ಗೆ ಬೂಸ್ಟರ್ ಡೋಸ್ ಕೊಟ್ಟಂತಿವೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ, ದೀಪು ಎಸ್ ಕುಮಾರ್ ಸಂಕಲನ ಪ್ಲಸ್ ಆಗಿದೆ. ಅದ್ದೂರಿತನಕ್ಕೆ ಯಾವುದೇ ಕೊರತೆಯಿಲ್ಲದಂತೆ ಸಂದೇಶ್ ಪ್ರೊಡಕ್ಷನ್ಸ್ ಘೋಸ್ಟ್ ನಿರ್ಮಿಸಿದೆ.
ಸಿನಿಮಾ ಸುತ್ತ ಸೃಷ್ಟಿಸಿದ್ದ ಹೈಪ್ ಗೆ, ದೊಡ್ಮನೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ `ಘೋಸ್ಟ್’ ಮೂಡಿಬಂದಿದೆ. ಖುದ್ದು ಶಿವಣ್ಣ ಅವರೇ ಹೇಳಿಕೊಂಡಿರುವಂತೆ `ಘೋಸ್ಟ್’ ಅವರ ಕರಿಯರ್ ನಲ್ಲಿ ವಿಭಿನ್ನ ಕಥಾಹಂದರವುಳ್ಳ ಸಿನಿಮಾ. ಈ ಹಿಂದೆ ಅಂಡರ್ ವಲ್ಡ್ ಸಿನಿಮಾದ ಭಾಗವಾಗಿದ್ರೂ ಕೂಡ `ಘೋಸ್ಟ್’ ನ ಗ್ಯಾಂಗ್‍ಸ್ಟರ್ ಪಾತ್ರ ಅವರಿಗೆ ತೃಪ್ತಿ ಕೊಟ್ಟಿದೆ. ಒಂದೇ ತರಹದ ಕ್ಯಾರೆಕ್ಟರ್‍ಗೆ ಅಂಟಿಕೊಳ್ಳದೇ ಹೊಸದೇನನ್ನೋ ಪ್ರಯೋಗ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಶಿವಣ್ಣ, ಅಮ್ಮ ಇದ್ದಿದ್ದರೆ `ಘೋಸ್ಟ್’ ಸಿನಿಮಾದ ಆನಂದ್‍ನ ನೋಡಿ ಅದೆಷ್ಟು ಖುಷಿಪಡ್ತಿದ್ದರೋ ಏನೋ ಅಂತ ಭಾವುಕರಾದರು.
ಅಮ್ಮ ಕಟ್ಟಿ ಬೆಳೆಸಿದ ಶಕ್ತಿಧಾಮದಲ್ಲೇ ಈ ಸಿನಿಮಾ ಡಿಸ್ ಕಷನ್ ನಡೆದಿತ್ತು. ಹೀಗಾಗಿ, `ಘೋಸ್ಟ್’ ಗೆ ಅಮ್ಮನ ಆಶೀರ್ವಾದ ಖಂಡಿತ ಇರುತ್ತೆ ಸಿನಿಮಾ ಸಕ್ಸಸ್ ಆಗುತ್ತೆ ಎಂದಿದ್ದರು. ಇದೀಗ, ಮೊದಲೇ ದಿನವೇ ಗ್ರ್ಯಾಂಡ್ ಓಪನ್ನಿಂಗ್ ಪಡೆದುಕೊಂಡಿದೆ. ಅನುಪಮ್ ಖೇರ್, ಜಯರಾಮ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾಬಳಗದ `ಘೋಸ್ಟ್’ ದೊಡ್ಡಮಟ್ಟದಲ್ಲೇ ಸದ್ದು ಮಾಡುತ್ತಿದೆ. ಬಾಲಯ್ಯ, ದಳಪತಿ ವಿಜಯ್, ರವಿತೇಜಾ ಸಿನಿಮಾಗಳ ಜೊತೆ ದಸರಾ ದಂಗಲ್‍ನಲ್ಲಿ ಸೆಣಸಾಡಿ ಸಕ್ಸಸ್ ಆಗುವಲ್ಲಿ `ಘೋಸ್ಟ್’ ಯಶಸ್ವಿಯಾಗಿದೆ. ಈಗಾಗಲೇ `ಘೋಸ್ಟ್ ಪಾರ್ಟ್-2′ ಯಾವಾಗ ಸರ್ ಎನ್ನುವ ಪ್ರಶ್ನೆ ರೈಸ್ ಆಗಿದೆ. ಕರ್ನಾಟಕದಲ್ಲಿ ಫಸ್ಟ್ ಡೇ ಕಲೆಕ್ಷನ್ ಎರಡು ಕೋಟಿ ಮೀರಿದ್ದು ವೀಕೆಂಡ್ ಹಾಗೂ ದಸರಾ ಹಾಲಿಡೇಸ್‍ನಲ್ಲಿ ಭರ್ಜರಿ ಕಮಾಯ್ ಮಾಡುವ ಎಲ್ಲಾ ಲಕ್ಷಣಗಳು ಕಾಣ್ತಿವೆ.
Web Stories