ಅರ್ಜುನ್ಯ ಜನ್ಯ (Arjun Janya) ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಟಿಸುತ್ತಿದ್ದಾರೆ ಎಂದು ಸುದ್ದಿ ಓದಿದ್ದೀರಿ. ಈ ಜೋಡಿಯ ಜೊತೆ ಮತ್ತೋರ್ವ ಪ್ರತಿಭಾವಂತ ನಟ ಸೇರ್ಪಡೆಯಾಗಿದ್ದಾರೆ. ನಿರ್ದೇಶಕ ನಟ ರಾಜ್ ಬಿ. ಶೆಟ್ಟಿ (Raj B. Shetty) ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಮೊದಲ ಸಿನಿಮಾದಲ್ಲಿ ಮೂವರು ನಾಯಕರಿಗೆ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಗಾಳಿಪಟ 2 ಚಿತ್ರದ ಯಶಸ್ಸಿನ ನಂತರ ರಮೇಶ್ ರೆಡ್ಡಿ (Ramesh Reddy)ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದೆ. ಮಾಸ್ ನ ಅಧಿಪತಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraj Kumar) ಅವರೊಂದಿಗೆ, ಮಾಸ್ ಗೆ “ಓಂ” ಕಾರ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಜೊತೆಯಾಗಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ
ಸ್ಟಾರ್ ಜೋಡಿಯ ಜೊತೆ ಇದೀಗ ಮಾಸ್ ಐಕಾನ್ ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿರುವುದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ ಹಾಗೂ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರ ಆರಂಭದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಬಹು ನಿರೀಕ್ಷಿತ ಈ ಚಿತ್ರ ಕಲಾರಸಿಕರಿಗೆ ಮನೋರಂಜನೆಯ ರಸದೌತಣ ನೀಡುವುದಂತೂ ಖಚಿತ.