ನಟ ಶಿವಣ್ಣ (Shivarajkumar) ಅವರು ಇಂದು (ಡಿ.18) ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿರುವ ಹಿನ್ನೆಲೆ ಪ್ರಸ್ತುತ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಹೆಲ್ತ್ ಚೆಕಪ್ ಮಾಡಿಸಿದ್ದೀನಿ. ಎಲ್ಲವೂ ಸರಿಯಾಗಿದೆ. ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ ಎಂದು ಶಿವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?
Advertisement
ಮನೆ ಹತ್ತಿರ ನನ್ನ ಆಪ್ತರು, ಅಭಿಮಾನಿಗಳು ಬರುತ್ತಿದ್ದಾರೆ. ಇದನ್ನು ನೋಡಿದಾಗ ನನಗೆ ಎಮೋಷನಲ್ ಆಗುತ್ತಿದೆ. ಹೆಲ್ತ್ ಚೆಕಪ್ ಮಾಡಿಸಿದ್ದೀನಿ ಎಲ್ಲವೂ ಸರಿಯಾಗಿದೆ. ನನ್ನ ತಂಗಿ ಮತ್ತು ಸಂಬಂಧಿಕರನ್ನು ನೋಡುವಾಗ ಬೇಜಾರ್ ಆಯ್ತು. ಅಭಿಮಾನಿಗಳನ್ನು ನೋಡಿದಾಗ ದುಃಖ ಆಗುತ್ತದೆ. ಅದು ಬಿಟ್ಟರೆ ನಾನು ಧೈರ್ಯವಾಗಿದ್ದೀನಿ. ಡಿ.24ರಂದು ನನಗೆ ಸರ್ಜರಿ ನಡೆಯುತ್ತಿದೆ. ಅದರ ಬಗ್ಗೆ ಪಾಸಿಟಿವ್ ಆಗಿದ್ದೀನಿ. ಈ ಬಗ್ಗೆ ನನಗೇನು ಯೋಚನೆ ಇಲ್ಲ ಎಂದು ಶಿವಣ್ಣ ಮಾತನಾಡಿದ್ದಾರೆ.
Advertisement
Advertisement
ಚಿಕಿತ್ಸೆಗಾಗಿ ಕೆಲವು ದಿನಗಳ ಕಾಲ ಮನೆಯಿಂದ ಆಚೆ ಇರುತ್ತೇವೆ. ಒಂದು ತಿಂಗಳಿಗೂ ಹೆಚ್ಚು ದಿನ ಮನೆ ಬಿಟ್ಟು ಇರುತ್ತಿರೋದು ಇದೇ ಮೊದಲ ಬಾರಿ ಎಂದಿದ್ದಾರೆ. ಇನ್ನೂ ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ. ಇದರಿಂದ ನನಗೆ ಖುಷಿ ಆಗುತ್ತಿದೆ. ಜ.26ಕ್ಕೆ ನಾನು ಬೆಂಗಳೂರಿಗೆ ಹಿಂದಿರುಗುತ್ತಿದ್ದೇನೆ ಎಂದರು.
Advertisement
ಇದೇ ವೇಳೆ ಸುದೀಪ್ ಭೇಟಿಯ ಬಗ್ಗೆ ಶಿವಣ್ಣ ಮಾತನಾಡಿ, ಅವರು ಬಂದಿದ್ದು ಖುಷಿಯಾಯ್ತು. ಯಾರು ಯೋಚನೆ ಮಾಡುವಂತಹದ್ದು ಏನು ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು. ನಂತರ ‘ಯುಐ’ ಮತ್ತು ‘ಮ್ಯಾಕ್ಸ್’ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಎರಡು ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭಕೋರಿದ್ದಾರೆ.