ಸ್ಯಾಂಡಲ್‌ವುಡ್ ನಟ ಶಿವಣ್ಣ (Shivarajkumar) ಶಸ್ತ್ರಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಅಮೆರಿಕದಲ್ಲಿರುವ ಶಿವಣ್ಣ ಅವರು ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು’ ಎಂದು ಹಾಡು ಹಾಡುತ್ತಾ ಶಿವಣ್ಣ ರಂಜಿಸಿದ್ದಾರೆ. ಇದನ್ನೂ ಓದಿ:ʻಗೇಮ್ ಚೇಂಜರ್ʼ ಸಿನಿ ನಿರ್ಮಾಪಕ ದಿಲ್ ರಾಜುಗೆ ಐಟಿ ಶಾಕ್ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ
ಸದ್ಯ ಪತ್ನಿ ಗೀತಾ ಜೊತೆ ಶಿವಣ್ಣ ಅಮೆರಿಕದಲ್ಲಿ ನೆಲೆಸಿದ್ದಾರೆ. ಚಿಕಿತ್ಸೆಯ ಬಳಿಕ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಸ್ನೇಹಿತರ ಜೊತೆ ನಟ ಸರಳವಾಗಿ ಪಾರ್ಟಿ ಮಾಡಿದ್ದಾರೆ. ಮಿಯಾಮಿಯಲ್ಲಿ ಆಪ್ತರ ಜೊತೆ ಭೋಜನ ಸವಿದಿದ್ದಾರೆ. ಆ ನಂತರ ಸ್ನೇಹಿತರಿಗಾಗಿ ರಾಜ್‌ಕುಮಾರ್ ಅವರ ಹಿಟ್ ಹಾಡು ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು’ ಎಂದು ಹಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ. ಅದಷ್ಟೇ ಅಲ್ಲ, ‘ಮುತ್ತಣ್ಣ ಪೀಪಿ ಊದುವ’ ಎಂದು ಹಾಡಿದ್ದಾರೆ.
ಇನ್ನೂ ಜ.26ಕ್ಕೆ ಶಿವಣ್ಣ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಲಿದ್ದಾರೆ. ‘A For ಆನಂದ’ ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.