ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಸಿನಿಮಾಗಳಿಗೆ ಸಹಿ ಮಾಡಿದ ಹೆಗ್ಗಳಿಕೆ ಶಿವರಾಜ್ ಕುಮಾರ್ (Shivaraj Kumar) ಅವರಿಗೆ ಸಲ್ಲಬೇಕು. ಶಿವಣ್ಣ ಅವರ ಆಪ್ತರೇ ಹೇಳುವಂತೆ ಇನ್ನೂ ಹತ್ತು ವರ್ಷಕ್ಕೆ ಆಗುವಷ್ಟು ಸಿನಿಮಾಗಳು ಅವರ ಕೈಯಲ್ಲಿವೆಯಂತೆ. ತಮಿಳಿನಲ್ಲೇ ಶಿವರಾಜ್ ಕುಮಾರ್ ಇದೀಗ ಎರಡು ಚಿತ್ರಗಳನ್ನು ಮಾಡಿದ್ದಾರೆ. ತೆಲುಗು ಚಿತ್ರೋದ್ಯಮದಿಂದಲೂ ಅವರಿಗೆ ಬೇಡಿಕೆಯಿದೆ. ಈ ನಡುವೆ ಒಟ್ಟು ಏಳು ಮಲ್ಟಿಸ್ಟಾರ್ ಸಿನಿಮಾಗಳಲ್ಲಿ (Multistar Movie) ಶಿವಣ್ಣ ಅಭಿನಯಿಸಲಿದ್ದಾರೆ.
Advertisement
ಅರ್ಜುನ್ ಜನ್ಯ ನಿರ್ದೇಶನದಲ್ಲಿ ಮೂಡಿ ಬರಲಿರುವ ಸಿನಿಮಾದಲ್ಲಿ ಉಪೇಂದ್ರ (Upendra) ಮತ್ತು ರಾಜ್ ಬಿ ಶೆಟ್ಟಿ ಜೊತೆ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ಅದ್ಧೂರಿಯಾಗಿ ಈ ಸಿನಿಮಾದ ಟೈಟಲ್ ಮತ್ತು ಮುಹೂರ್ತ ಕಾರ್ಯಕ್ರಮ ನಡೆದಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ. ಗಾಳಿಪಟ 2, ಪಡ್ಡೆಹುಲಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ ಈ ಸಿನಿಮಾದ ನಿರ್ಮಾಪಕರು.
Advertisement
Advertisement
ತಮಿಳಿನಲ್ಲಿ ಏಕಕಾಲಕ್ಕೆ ಎರಡು ಚಿತ್ರಗಳನ್ನು ಒಪ್ಪಿಕೊಂಡು ಅವುಗಳ ಶೂಟಿಂಗ್ ಕೂಡ ಮುಗಿಸಿದ್ದಾರೆ ಶಿವರಾಜ್ ಕುಮಾರ್. ಜೈಲರ್ ಹೆಸರಿನ ಚಿತ್ರದಲ್ಲಿ ರಜನಿಕಾಂತ್ (Rajinikanth) ನಾಯಕನಾದರೆ, ಮತ್ತೊಂದು ಚಿತ್ರದಲ್ಲಿ ಧನುಷ್ (Dhanush) ಹೀರೋ. ಈ ಇಬ್ಬರೂ ಹೀರೋಗಳ ಜೊತೆ ಶಿವಣ್ಣ ಅಪರೂಪದ ಪಾತ್ರಗಳನ್ನು ಮಾಡಿದ್ದಾರೆ. ಈ ಎರಡೂ ಚಿತ್ರಗಳು ಈಗಾಗಲೇ ನಿರೀಕ್ಷೆ ಮೂಡಿಸಿವೆ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?
Advertisement
ಶಿವರಾಜ್ ಕುಮಾರ್ ಜೊತೆ ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ (Ganesh) ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಕೆ.ಎಸ್ ರವಿಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಚಿತ್ರಕ್ಕೆ ಇನ್ನೂ ಯಾವುದೇ ಶೀರ್ಷಿಕೆ ಇಟ್ಟಿಲ್ಲ. ಸೂರಪ್ಪ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಖ್ಯಾತ ಡಾನ್ಸರ್, ನಿರ್ದೇಶಕ, ನಟ ಪ್ರಭುದೇವ (Prabhudev) ಜೊತೆ ಕೂಡ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಸಿನಿಮಾದ ನಿರ್ಮಾಪಕರು. ಶಿವಣ್ಣ ಹುಟ್ಟು ಹಬ್ಬದ ದಿನದಂದು ಚಿತ್ರದ ಹೆಸರು ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಶಿವರಾಜ್ ಕುಮಾರ್ ಜೊತೆ ಅಜಯ್ ರಾವ್ (Ajay Rao) ಕೂಡ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಕೂಡ ಇಂದು ರಿಲೀಸ್ ಆಗಿದೆ. ಬಾಹುಬಲಿ ಎಸ್.ಕೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಕಿರಣ್ ಎನ್ನುವವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಕೂಡ ಇನ್ನೂ ರಿವೀಲ್ ಆಗಿಲ್ಲ.
Web Stories