ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರಕ್ಕೆ ಶಿವಣ್ಣ ಹೀರೋ

Public TV
1 Min Read
Kabzaa 3

ನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ನಿರ್ಮಿಸಿರುವ ಆರ್ ಚಂದ್ರು, ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಐದು ಚಿತ್ರಗಳಿಗೆ ಚಾಲನೆ ನೀಡಿದ್ದರು.

R. Chandru

ಈಗ ಆರ್. ಸಿ. ಸ್ಟುಡಿಯೋಸ್ ಸಂಸ್ಥೆ ಮೂಲಕ ಆರನೇ ಚಿತ್ರದ ಘೋಷಣೆಯಾಗಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar) ಅಭಿನಯಿಸುತ್ತಿದ್ದಾರೆ. ಆರ್ ಚಂದ್ರು ಅವರು ಟ್ವೀಟ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.

R. Chandru 1

ಇದೇ ದಿನ ಚಂದ್ರು  (R. Chandru) ಈ ಸಿನಿಮಾ ಘೋಷಣೆ ಮಾಡುವುದಕ್ಕೂ ಕಾರಣವಿದೆ. ಶಿವರಾಜ್ ಕುಮಾರ್ ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಹಿಟ್ ಸಿನಿಮಾ ‘ಮೈಲಾರಿ’ ಮುಹೂರ್ತ ನಡೆದ ದಿನವಿಂದು. ಈ ಕಾರಣದಿಂದಾಗಿ ಇಂದೇ ಶಿವಣ್ಣ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ.

 

ಈ ಸಿನಿಮಾದ ನಿರ್ದೇಶಕರು ಮತ್ತು ಇತರ ತಾಂತ್ರಿಕ ವಿಷಯಗಳನ್ನು ಚಂದ್ರು ಹಂಚಿಕೊಂಡಿಲ್ಲ. ಸಿನಿಮಾ ಇನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ತಿಳಿಸುತ್ತಾರಂತೆ. ಆರ್.ಸಿ ಬ್ಯಾನರ್ ನಲ್ಲಿ ಅನೌನ್ಸ್ ಆಗಿರುವ ಪ್ರತಿ ಚಿತ್ರಗಳು ಕುತೂಹಲ ಮತ್ತು ನಿರೀಕ್ಷೆ ಮೂಡಿಸುವಂತಿದೆ. ಶಿವಣ್ಣ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದು ಮತ್ತೊಂದು ನಿರೀಕ್ಷೆ ಜೊತೆಯಾಗಿದೆ.

Share This Article