‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ

Public TV
1 Min Read
shivani swamy

ನ್ನಡ ಸರಿಗಮಪ ಸೀಸನ್‌ 21ಕ್ಕೆ (Sa Ri Ga Ma Pa) ಅದ್ದೂರಿ ತೆರೆ ಬಿದ್ದಿದೆ. ಈ ಸೀಸನ್‌ನ ವಿನ್ನರ್‌ ಪಟ್ಟವು ಬೀದರ್‌ನ ಶಿವಾನಿ ಸ್ವಾಮಿಗೆ (Shivai Swami) ಒಲಿದಿದೆ.

ಬೀದರ್‌ನ ಪ್ರತಿಭೆ ಶಿವಾನಿ ಸೀಸನ್‌ ಕೊನೆವರೆಗೂ ತಮ್ಮ ಅದ್ಬುತ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಆಕೆ ಹಾಡಿದ್ದ ಶಿವಾ ಶಿವಾ ಗಾಯನಕ್ಕೆ ಇಡೀ ಕರುನಾಡೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL

ಶಿವಾನಿ ಈ ಹಿಂದೆ ಹಿಂದಿ ಐಡಿಯಲ್‌ ಸಂಗೀತ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅಲ್ಲಿಯೂ ಜನಪ್ರಿಯತೆ ಗಳಿಸಿದ್ದರು. ಸರಿಗಮಪ ಸೀಸನ್‌ 21ರ ‘ಟಿಕೆಟ್‌ ಟು ಫಿನಾಲೆ’ ಮೊದಲ ಪಾಸ್‌ ಅನ್ನು ಶಿವಾನಿಯೇ ತೆಗೆದುಕೊಂಡಿದ್ದರು. ಆ ಮೂಲಕ ಫಿನಾಲೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದರು.

ಶಿವಾನಿ, ಬಾಳು ಬೆಳಗುಂದಿ, ರಶ್ಮಿ, ಆರಾಧ್ಯಾ ರಾವ್‌, ದ್ಯಾಮೇಶ್‌, ಅಮೋಘ ವರ್ಷ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಶಿವಾನಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ

Share This Article