ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

Public TV
1 Min Read
kodi mutt swamiji jewelry theft case

ಬೆಂಗಳೂರು: ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಅವರ ಬಳಿಯಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ 7 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹಾಸನ (Hassan) ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರ ಚಿನ್ನಾಭರಣ ಕಳ್ಳತನವಾಗಿತ್ತು. ಸ್ವಾಮೀಜಿ ಬಳಿ ಆರೋಪಿ ಚಿನ್ನಾಭರಣ, ನಗದು ಕಳವು ಮಾಡಿದ್ದ. ಆರೋಪಿಯನ್ನು ಏಳು ವರ್ಷಗಳ ಬಳಿಕ ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು | ಒಂದೇ ಮೀಟರ್ – 16 ಮನೆಗಳಿಗೆ ವಿದ್ಯುತ್

swamiji jewelry theft case accused

ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಎಂಬಾತನ ಬಂಧನವಾಗಿದೆ. 2018 ರಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲೆದರ್ ಬ್ಯಾಗ್‌ನಲ್ಲಿ ಚಿನ್ನದ ಆಭರಣ, ನಗದು ಹಣವನ್ನು ಇಟ್ಟು ಸ್ವಾಮೀಜಿ ನಿದ್ದೆಗೆ ಜಾರಿದ್ದರು. ತಡರಾತ್ರಿ ಎಚ್ಚರಗೊಂಡು ನೋಡಿದ ವೇಳೆ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನವಾಗಿತ್ತು.

ಚಿನ್ನದ ಸರ 250 ಗ್ರಾಂ. ಗೌರಿಶಂಕರ ರುದ್ರಾಕ್ಷಿ ಪದಕ, ಎರಡು ಚಿನ್ನದ ಉಂಗುರಗಳು 50 ಗ್ರಾಂ., 1.62 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಏಳು ವರ್ಷಗಳ ನಂತರ ಆರೋಪಿ ಜಿತೇಂದ್ರ ಕುಮಾರ್ ಬಂಧನ ಮಾಡಿದ್ದಾರೆ. ಇದನ್ನೂ ಓದಿ: Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

ಬಂಧಿತನಿಂದ 13 ಕೇಸ್‌ಗಳು ಪತ್ತೆಯಾಗಿದ್ದು, ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದ ಆರೋಪಿ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ. ಈ ವಿಚಾರ ರೈಲ್ವೆ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

Share This Article