ವಿಜಯಪುರ: ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ವರದಿ ಬರುವವರೆಗೆ ಕಾಯೋಣ ಎಂದು ಶಾಸಕ ಶಿವಾನಂದ ಪಾಟೀಲ್ (Shivanand Patil) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ (Dharmasthala) ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ, ಆ ದೇವರ ಹೆಸರಿನಲ್ಲಿ ಏನು ಆಗಿಲ್ಲ ಎಂದು ಸಾಬೀತಾದರೆ ನಾವು ಸಂತೋಷಪಡುತ್ತೇವೆ. ಕೋರ್ಟ್ ಆದೇಶದ ಮೇಲೆ ತನಿಖೆ ಆಗುತ್ತಿದೆ. ಈಗ್ಯಾಕೆ ಅದರಲ್ಲಿ ರಾಜಕೀಯ ಮಾಡೋದು. ವರದಿ ಬರುತ್ತೆ, ಕಾಯೋಣ ಎಂದು ಬಿಜೆಪಿಗರಿಗೆ ಟಾಂಗ್ ಕೊಟ್ಟರು.
ನಾವು ಪ್ರಮೋದಾದೇವಿ ರಾಜಮನೆತನದ ಬಗ್ಗೆ ಯಾವತ್ತು ವಿರೋಧ ಮಾಡಿಲ್ಲ. ಯಾರೂ ಕೂಡ ವಿರೋಧ ಮಾಡಬಾರದು. ಯಾಕಂದ್ರೆ ಪ್ರಮೋದಾದೇವಿ ಅವರ ಕೊಡುಗೆ ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಅದನ್ನು ಇಡೀ ದೇಶ ಅನುಕರಣೆ ಮಾಡಿದೆ ಎಂದರು.