ಶಿವಮೊಗ್ಗ: ಪರೀಕ್ಷಾ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ (SSLC Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪರಶುರಾಮ್ ಬಾಬು (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆನಂದಪುರದ KPSC ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಚೆನ್ನಾಗಿಯೇ ಓದುತ್ತಿದ್ದ. ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಆದ್ರೆ ಕೊನೇ ಕ್ಷಣದಲ್ಲಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಇಂದಿನಿಂದ ಪರೀಕ್ಷೆ ಆರಂಭ:
ರಾಜ್ಯಾದ್ಯಂತ ಇಂದಿನ (ಮಾ.25) ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆ (SSLC Public Exams) ಪ್ರಾರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೊತೆ ಬಾಕಿ ಉಳಿದಿರೋ 5,8,9 ತರಗತಿಗಳಿಗೂ ಪಬ್ಲಿಕ್ ಪರೀಕ್ಷೆ ಶುರುವಾಗಿದೆ.
Advertisement
ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರು ಇದ್ದಾರೆ. 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
Advertisement
ನಿರ್ದೇಶಕರು ಮತ್ತು ಸಹ ನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಡಯಟ್ ಪ್ರಾಂಶುಪಾಲರನ್ನು ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಡಯಟ್ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ವೇಳಾಪಟ್ಟಿ
ಮಾರ್ಚ್ 25- ಪ್ರಥಮ ಭಾಷೆ.
ಮಾರ್ಚ್ 27- ಸಮಾಜ ವಿಜ್ಞಾನ
ಮಾರ್ಚ್ 30- ವಿಜ್ಞಾನ
ಏಪ್ರಿಲ್ 2- ಗಣಿತ
ಏಪ್ರಿಲ್ 4- ತೃತೀಯ ಭಾಷೆ
ಏಪ್ರಿಲ್ 6- ದ್ವೀತಿಯ ಭಾಷೆ
5ನೇ ತರಗತಿ ವೇಳಾಪಟ್ಟಿ
ಮಾರ್ಚ್ 25- ಪರಿಸರ ಅಧ್ಯಯನ.
ಮಾರ್ಚ್ 26- ಗಣಿತ
8ನೇ ತರಗತಿ ವೇಳಾಪಟ್ಟಿ
ಮಾರ್ಚ್ 25- ತೃತೀಯ ಭಾಷೆ.
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ
9ನೇ ತರಗತಿ ವೇಳಾಪಟ್ಟಿ
ಮಾರ್ಚ್ 25- ತೃತೀಯ ಭಾಷೆ
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ.